ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡಲೇ ಬೇಕಾದ ಸ್ಥಳ: ಮೈಸೂರು ಮುಂದೆ, ತಾಜ್ ಹಿಂದೆ

By Mahesh
|
Google Oneindia Kannada News

Mysore Palace beats Taj Mahal
ಮೈಸೂರು, ಅ.28: ವಿಶ್ವದಲ್ಲಿ ಮಾನವ ನಿರ್ಮಿತ ಅದ್ಭುತ ಕಟ್ಟಡಗಳಲ್ಲಿ ಒಂದಾದ 'ತಾಜ್ ಮಹಲ್' ಸ್ಮಾರಕವನ್ನು ನಮ್ಮ ಮೈಸೂರಿನ ಅರಮನೆ ಹಿಂದಿಕ್ಕಿದೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವದಲ್ಲಿ ನೋಡಲೇ ಬೇಕಾದ 31 ತಾಣಗಳ ಪಟ್ಟಿಯಲ್ಲಿ ಮೈಸೂರು ಒಡೆಯರ್ ಅವರ ಅರಮನೆ ಕೂಡಾ ಸೇರಿದೆ.

ಪ್ರತಿ ವರ್ಷ ಸುಮಾರು 2.5 ಮಿಲಿಯನ್ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮೈಸೂರು ಅರಮನೆಗೆ ವಿಶ್ವದೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಅವರ ಪ್ರಕಾರ ವಿದೇಶಿಯರ ಪ್ರವಾಸ ತಾಣಗಳ ಪಟ್ಟಿಯಲ್ಲಿ ಮೈಸೂರು, ಕರ್ನಾಟಕ ಖಾಯಂ ಸ್ಥಾನ ಪಡೆದಿರುತ್ತದೆ.

ಸಾಗರೋತ್ತರ ದೇಶಗಳ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸುವ ಪ್ರೇಮ ಸ್ಮಾರಕ 'ತಾಜ್ ಮಹಲ್' ನೋಡಲು ವಾರ್ಷಿಕವಾಗಿ 2 ರಿಂದ 3 ಮಿಲಿಯನ್ ಪ್ರವಾಸಿಗರು ಬರುತ್ತಾರೆ.

358 ವರ್ಷಗಳ ಇತಿಹಾಸವಿರುವ ತಾಜಮಹಲ್ ಸ್ಮಾರಕ ಇನ್ನು ಐದು ವರ್ಷಗಳಲ್ಲಿ ಕುಸಿದು ಬೀಳಲಿದೆ ಎಂದು ಇತ್ತೀಚೆಗೆ ಊಹಾಪೋಹ ಸುದ್ದಿ ಹಬ್ಬಿತ್ತು. ಪರಿಸರ ಮಾಲಿನ್ಯದಿಂದ ತಾಜ್ ಮಹಲ್ ನ ಶ್ವೇತ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿತ್ತು.

ಆದರೆ, ಇದರಿಂದ ತಾಜ್ ಮಹಲ್ ಜನಪ್ರಿಯತೆ ಕುಗ್ಗಿಲ್ಲ, ತಾಜ್ ಮಹಲ್ ಬದಲು ಮೈಸೂರು ಆಯ್ಕೆಯಾಗಿದೆ ಎನ್ನುವುದಕ್ಕಿಂತ ಮೈಸೂರು ಅರಮನೆ ಜನಪ್ರಿಯತೆ ಇತ್ತೀಚೆಗೆ ಹೆಚ್ಚಿದೆ ಎಂದು ಪ್ರವಾಸೋದ್ಯಮ ಅಧಿಕಾರಿಗಳು ಹೇಳುತ್ತಾರೆ.

English summary
Mysore palace of Karnataka grabbed a rank in the list of 31 "Must Visit" places by New York Times. What surprises many is - Taj Mahal, which is one of the seven wonders of the world, failed to find a place in the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X