ಅಡ್ವಾಣಿ ರಥ ಯಾತ್ರೆ ದಾರಿಯಲ್ಲಿ ಆರ್ ಡಿಎಕ್ಸ್ ಪತ್ತೆ

ಅಡ್ವಾಣಿ ಅವರ ರಥ ಯಾತ್ರೆ ಸಾಗುವ ದಾರಿಯಲ್ಲೇ ಈ ಆರ್ ಡಿಎಕ್ಸ್ ಬಾಂಬ್ ಗಳು ಸಿಕ್ಕಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ಕೇರಳದಲ್ಲಿರುವ ಅಡ್ವಾಣಿ ಅವರು ಮಧುರೈನ ರಾಜಪಾಳ್ಯಂ ಹಾದಿಯಲ್ಲಿ ಸಾಗಬೇಕಿತ್ತು. ಆದರೆ ಬಾಂಬ್ ಪತ್ತೆ ಹಿನ್ನೆಲೆಯಲ್ಲಿ ಯಾತ್ರೆ ಹಾದಿ ಬದಲಿಸಲಾಗಿದೆ.
ಮಧುರೈ ಹಾಗೂ ಟಿ ಕಲ್ಲು ಪಟ್ಟಿ ನಡುವಿನ ಸೇತುವೆಯ ಕೆಳಗೆ ಆರ್ ಡಿಎಕ್ಸ್ ಬಾಂಬ್ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. 6 ಅಡಿ ಪ್ಲಾಸ್ಟಿಕ್ ಪೈಪ್ ಗೆ ಹೊಂದಿಕೊಂಡಂತೆ ಇರುವ ಬಾಂಬ್ ಗೆ 25 ಮೀ ತಂತಿ ಅಳವಡಿಸಲಾಗಿದ್ದು, ದೂರದಿಂದ ಟ್ರಿಗರ್ ಮಾಡಿ ಸ್ಫೋಟಿಸಲು ಸಂಚು ರೂಪಿಸಲಾಗಿತ್ತು ಎನ್ನಲಾಗಿದೆ.
ಎನ್ ಡಿಎ ಕಮ್ಯಾಂಡೋಗಳು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಡ್ವಾಣಿಗೆ 3 ಸುತ್ತಿನ ಭದ್ರತೆ ಒದಗಿಸಲಾಗಿದೆ. ಅಡ್ವಾಣಿ ರಥ ಯಾತ್ರೆಗೆ ಉಗ್ರರ ಭೀತಿ ಇದೆ ಎಂದು ಕೇಂದ್ರ ಭದ್ರತಾ ಮಂಡಳಿ ಸೂಚಿಸಿದೆ.












Click it and Unblock the Notifications