ಕೃಷ್ಣಾ ಮೇಲ್ದಂಡೆ ಅಕ್ರಮ: ಕೃಷ್ಣ ಕೃಷ್ಣಾ! ಗೌಡರೂ ಕಟಕಟೆಗೆ

ಈ ತುಂಡು ಗುತ್ತಿಗೆ ಅವ್ಯವಹಾರದ 'ಭೂತ'ವು ಅಂದು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರಿಗೆ ದೀಪಾವಳಿಯ ಶುಭ ಸಂದರ್ಭದಲ್ಲಿ ಕರಾಳವಾಗುವ ಸಾಧ್ಯತೆ ಇದೆ.
1995-98ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳು, ಗುತ್ತಿಗೆದಾರರು, ಅಧಿಕಾರೇತರರು, ಸಿಬ್ಬಂದಿ ಹಾಗೂ ಇತರರ ಹೆಸರುಗಳನ್ನು ಹಗರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ರಮೇಶ್ ಖಚಿತಪಡಿಸಿದ್ದಾರೆ.
ಕೆಐಎಡಿಬಿ ಭೂ ಹಗರಣ, ಗಣಿ ಹಗರಣ, ಜಮೀನು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಆಡಳಿತಾರೂಢ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸಮೇತ ಮೂವರು ಮಾಜಿ ಸಚಿವರು ಜೈಲು ಪಾಲಾಗಿರುವ ಈ ಹಂತದಲ್ಲೇ 15 ವರ್ಷದ ಹಿಂದಿನ ಪ್ರಕರಣಕ್ಕೆ ಮತ್ತೆ ಜೀವ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ಸೋಮಶೇಖರ್ ರೆಡ್ಡಿ ದೂರಿನ ಫಲ: ಬೆಂಗಳೂರು ಇಂದಿರಾನಗರದ ನಿವಾಸಿ, ನಿವೃತ್ತ ಮುಖ್ಯ ಇಂಜಿನಿಯರ್ ಎಚ್.ಡಿ. ಸೋಮಶೇಖರ್ ರೆಡ್ಡಿ ಎಂಬುವವರು ಹೈಕೋರ್ಟಿನಲ್ಲಿ ಸದರಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ದಾಖಲಿಸಿದ್ದರು. ಅದರಂತೆ, ಅಂದಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ಮತ್ತು ನ್ಯಾ. ಮೋಹನ್ ಶಾಂತನಗೌಡರ್ ಅವರ ವಿಭಾಗೀಯ ಪೀಠ 2009ರ ನವೆಂಬರ್ 9ರಂದು ವಿಚಾರಣೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿತ್ತು.












Click it and Unblock the Notifications