ಏನಿದು ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ತುಂಡು ಗುತ್ತಿಗೆ ಹಗರಣ?

ukp-scam-haunts-devegowda-project-details
ಬೆಂಗಳೂರು, ಅ.27: ಬಿಜಾಪುರ, ಬಾಗಲಕೋಟೆ, ಗುಲ್ಬರ್ಗ, ರಾಯಚೂರು ಹಾಗೂ ಕೊಪ್ಪಳದ ಬರಪೀಡಿತ ಜಿಲ್ಲೆಗಳ 6,220 ಚದರ ಕಿ.ಮೀ. ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿತ್ತು.

ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ಆಗುವ ಅವಕಾಶ ದೊರೆತು ದೆಹಲಿಗೆ ಹೋಗುವ ಸಂದರ್ಭದಲ್ಲಿ ರಾತ್ರೋರಾತ್ರಿ ತರಾತುರಿಯಲ್ಲಿ ಯೋಜನೆಯ ಗುತ್ತಿಗೆ ಕಾಮಗಾರಿ ನೀಡಲಾಗಿತ್ತು. ಟೆಂಡರ್ ಕರೆದು ಕಾಮಗಾರಿ ನೀಡಬೇಕೆಂಬ ಸಹೋದ್ಯೋಗಿಗಳ ಸಲಹೆಯನ್ನು ಲೆಕ್ಕಿಸದೆ ತುಂಡು ಗುತ್ತಿಗೆ ಕಡತಗಳನ್ನು ಅನುಮೋದಿಸಿದ್ದರು.

ನಿಯಮಾವಳಿಗಳನ್ನು ಪಾಲಿಸದೆ ಕೆಲವು ಕಾಮಗಾರಿಗಳ ಮೊತ್ತವನ್ನು 2.5 ಕೋಟಿ ರೂ.ಗಳಿಂದ 5 ಕೋಟಿ ರೂ.ಗೆ ಹೆಚ್ಚಿಸಿದ್ದರು. ಒಟ್ಟಾರೆ ಗುತ್ತಿಗೆ ನೀಡುವಲ್ಲಿ ಅವ್ಯವಹಾರ ನಡೆದಿದೆ ಎಂಬುದು ಪ್ರಮುಖ ಆರೋಪ. ಸುಮಾರು 400 ಕೋಟಿ ರೂ.ಗಳನ್ನು ಖಾಸಗಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಕೃಷ್ಣಾ ಮೇಲ್ದಂಡೆ ಯೋಜನೆಯ ರೂಪುಗೊಂಡಿದ್ದು 1964 ರಲ್ಲಿ. ಆಗಿನ ಕೇಂದ್ರ ಸಚಿವ ಲಾಲ್‌ ಬಹದ್ದೂರ್ ಶಾಸ್ತ್ರಿ ಅವರು ಮೇ 22 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. 120 ಕೋಟಿ ರೂ. ಮೊತ್ತದ ಯೋಜನೆ ಈಗ 12,000 ಕೋಟಿ ರೂ.ಗೆ ತಲುಪಿದೆ.

ಎರಡೂ ಹಂತದ ಕಾಮಗಾರಿಗೆ ಇದುವರೆಗೂ 10,000 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ. ಪ್ರಥಮ ಹಂತದ ಕಾಮಗಾರಿ ಮುಗಿದಿದ್ದು ಎರಡನೇ ಹಂತದ ಕಾಮಗಾರಿ ಈಗಲೂ ಮುಂದುವರಿದಿದೆ. ಜಲಸಂಪನ್ಮೂಲ ಇಲಾಖೆಯಿಂದ ಕೈಗೊಂಡಿದ್ದ ಯೋಜನೆಗೆ ಇದೀಗ ಕೃಷ್ಣಾ ಜಲಭಾಗ್ಯ ನಿಗಮ ನೋಡಲ್‌ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+