ಹಾಸನಾಂಬೆ ದರ್ಶನ ಪಡೆದ ಮಾಜಿ ಪ್ರಧಾನಿ: ದೇವೇಗೌಡರಿಗೆ ದೇವಿಯ ಅಭಯ
ಹಾಸನ,
ಅ.27: ಇತ್ತ ರಾಜಧಾನಿಯಲ್ಲಿ ಕೃಷ್ಣಾ ಮೇಲ್ದಂಡೆ ಗುತ್ತಿಗೆ ಹಗರಣದ ಹುತ್ತಗಳು ಧುತ್ತನೆ ಕಾಣಿಸಿಕೊಳ್ಳುತ್ತಿರುವಾಗ ಅತ್ತ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ತಮ್ಮ ತವರಿನಲ್ಲಿ ಬುಧವಾರ ಸಂಜೆ ಹಾಸನಾಂಬಾ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. id="toptextpromo">ವರ್ಷಕ್ಕೊಮ್ಮೆ
10 ದಿನ ಮಾತ್ರ ದರ್ಶನ ಭಾಗ್ಯ ನೀಡುವ ಹಾಸನಾಂಬೆ ದರ್ಶನವನ್ನು ದೇವೇಗೌಡರು ಪ್ರತಿ ವರ್ಷವೂ ತಪ್ಪದೆ ಪಡೆಯುತ್ತಾರೆ. ಕುಟುಂಬದ ಬಹುತೇಕ ಸದಸ್ಯರೂಡಗೂಡಿ ದೇವಿಯ ದರ್ಶನ ಪಡೆಯುವ ಸಂಪ್ರದಾಯವನ್ನು ದೊಡ್ಡಗೌಡರು ಅನುಸರಿಸಿಕೊಂಡು ಬಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಂದು
ದೇವೇಗೌಡರೊಂದಿಗೆ ಹೆಚ್. ಡಿ. ರೇವಣ್ಣ , ಶಾಸಕ ಹೆಚ್.ಎಸ್. ಪ್ರಕಾಶ್, ನಗರಸಭಾ ಅಧ್ಯಕ್ಷ ಸಿ.ಆರ್. ಶಂಕರ್, ರಾಜ್ಯ ಸಭಾ ಮಾಜಿ ಸದಸ್ಯ ಹೆಚ್.ಕೆ. ಜವರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಅವರು ಉಪಸ್ಥಿತರಿದ್ದರು.











Click it and Unblock the Notifications