ಗುರು ರಾಮಭಟ್ಟರ ಕಾಲಿಗೆರಗಿದ ಸಿಎಂ ಡಿವಿಎಸ್

DV Sadananda gowda
ಪುತ್ತೂರು, ಅ.25: ಮುಖ್ಯಮಂತ್ರಿ ಪಟ್ಟಕ್ಕೇರಿದ ಮೇಲೆ ಡಿವಿಎಸ್ ಗೆ ಸೊಕ್ಕು ಬಂದಿದೆ ತನ್ನ ಗುರುವನ್ನೇ ಮರೆತಿದ್ದಾನೆ ಎಂದು ಮುಖ್ಯಮಂತ್ರಿ ಸದಾನಂದ ಗೌಡರನ್ನು ಟೀಕಿಸುತ್ತಿದ್ದವರಿಗೆ ಅಚ್ಚರಿಯಾಗುವಂಥ ಪ್ರಸಂಗ ನಡೆದಿದೆ.

ಡಿವಿ ಸದಾನಂದ ಗೌಡ ಅವರು ಸೋಮವಾರ ರಾತ್ರಿ ತಮ್ಮ ರಾಜಕೀಯ ಗುರು ಸ್ವಾಭಿಮಾನಿ ವೇದಿಕೆಯ ಗೌರವಾಧ್ಯಕ್ಷ ಕೆ. ರಾಮಭಟ್‌ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದರು. ಗುರು ಶಿಷ್ಯರ ಸಮಾಗಮದಿಂದ ಪುತ್ತೂರಿನ ರಾಜಕೀಯ ವಲಯಕ್ಕೆ ಅಚ್ಚರಿ ಮೂಡಿಸಿದ್ದಂತೂ ಸತ್ಯ.

ವಿರಸಕ್ಕೆ ಶಕ್ಕೂ ಮೇಡಂ ಕಾರಣ?: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಮಭಟ್‌ ಮತ್ತು ಡಿವಿಎಸ್ ನಡುವೆ ರಾಜಕೀಯ ಮುನಿಸು ಉಂಟಾಗಿತ್ತು. ಇದರಲ್ಲಿ ನನ್ನ ಪಾತ್ರವೇನು ಇಲ್ಲ. ಪಕ್ಷದ ನಿರ್ಧಾರ ಎಂದು ಹೇಳಿದರೂ ರಾಮ್ ಭಟ್ ಕರಗಿರಲಿಲ್ಲ.

ಆರೆಸ್ಸೆಸ್ ಸಂಧಾನ ಸಫಲ : ಡಿವಿಎಸ್ ಅವರು ಆರೆಸ್ಸೆಸ್‌ ಹಿರಿಯ ನೇತಾರರಾದ ಮೈ.ಚ. ಜಯದೇವ, ಡಾ| ಪ್ರಭಾಕರ ಭಟ್‌ ಅವರೊಡನೆ ಆಪ್ತ ಸಮಾಲೋಚನೆ ನಡೆಸಿ, ರಾಮಭಟ್ ರನ್ನು ಭೇಟಿ ಮಾಡುವ ಸಂಕಲ್ಪ ಮಾಡಿದ್ದಾರೆ.

ಸೋಮವಾರ ರಾತ್ರಿ ಮುಖ್ಯಮಂತ್ರಿ ಸದಾನಂದ ಗೌಡರ ಕಾರು ರಾಮಭಟ್‌ ಅವರ ಮನೆ ಮುಂದೆ ನಿಂತಾಗ, ರಾಮ್ ಭಟ್ ಗೆ ಆದ ಸಂತೋಷ ಅಷ್ಟಿಷ್ಟಲ್ಲ ಎಂದು ನೋಡಿದವರು ಹೇಳುತ್ತಾರೆ.

ಪಕ್ಷದ ಹಿತದೃಷ್ಟಿಯಿಂದ, ಆರೆಸ್ಸೆಸ್ ನಿರ್ದೇಶನದಿಂದ ರಾಮ್ ಭಟ್ ಅವರಿಂದ ದೂರವಿದ್ದ ಶಿಷ್ಯ ಸದಾನಂದ ಗೌಡ ಕೊನೆಗೂ ಗುರು ರಾಮಭಟ್ಟರ ಆಶೀರ್ವಾದ ಪಡೆದು ಸಂತಸದಿಂದ ಹಿಂತಿರುಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+