ಚಾಲಕನ ಪತ್ನಿಯ ಮೇಲೆ ಲೈಂಗಿಕ ಹಲ್ಲೆ: ಉದ್ಯಮಿ ಬಂಧನ

sexual-harrasement-on-drivers-wife-businessman-held
ನವದೆಹಲಿ, ಅ.24: ತನ್ನ ಕಾರು ಚಾಲಕನ ಪತ್ನಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಉದ್ಯಮಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ಹೊರವಲಯದಲ್ಲಿ ಅಕ್ಟೋಬರ್ 19ರಂದು ಈ ಘಟನೆ ನಡೆದಿದೆ.

ಸಾರಿಗೆ ಉದ್ಯಮಿ ಜಗಜಿತ್ ಸಿಂಗ್ ಬಾಧಿತ ಮಹಿಳೆಯನ್ನು ಚಂಡೀಗಢದಲ್ಲಿ ಹೋಟೆಲಿಗೆ ಕರೆದೊಯ್ಯುವ ಮುನ್ನ ಆಕೆಗೆ ತಂಪು ಪಾನೀಯದಲ್ಲಿ ಮತ್ತುಬರಿಸುವ ಔಷಧ ನೀಡಿದ್ದ ಎನ್ನಲಾಗಿದೆ. ಆರೋಪಿ ಜಗಜಿತ್ ಹೋಟೆಲಿನಲ್ಲಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.

ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದ್ದು, ಆಕೆಯ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ನನ್ನ ಚಾಲಕ ಮತ್ತು ಆತನ ಪತ್ನಿಯ ಸಂಸಾರ ಬಿರುಕು ಬಿಟ್ಟಿತ್ತು. ನಾನು ಅದರ ದುರ್ಲಾಭ ಪಡೆಯಲು ಯತ್ನಿಸಿದೆ ಎಂದು ಪೊಲೀಸರ ಎದುರು ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ನಿಮ್ಮ ಸಂಸಾರವನ್ನು ಸರಿ ದಾರಿಗೆ ತರುತ್ತೇನೆ ಬಾ ಎಂದು ಪುಸಲಾಯಿಸಿದ ಆರೋಪಿ ಜಗಜಿತ್, ಮಹಿಳೆಯನ್ನು ಸೀದಾ ಹೋಟೆಲಿಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯನ್ನು ಲೈಂಗಿಕವಾಗಿ ಹಿಂಸಿಸಿದ ಬಳಿಕ ಮಾರನೆಯ ದಿನ ವಾಪಸ್ ಕರೆತಂದು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+