ನಮ್ಮ ಮೆಟ್ರೋನಲ್ಲಿ ಮಕ್ಕಳಿಗೂ ಟಿಕೆಟ್ ತಗೋ ಬೇಕಾ!?

ಬಂಡಿಯನ್ನು ಹಿಂದಕ್ಕೆ ತಿರುಗಿಸಿದಾಗ ... ಅಪ್ಪ-ಅಮ್ಮಂದಿರಿಗೆ ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಎಂದಿಗೂ ಮಕ್ಕಳೇ. ಅದರಲ್ಲೂ ಬಸ್ಸು, ರೈಲು ಹತ್ತಿದರಂತೂ ಮಗುವಿಗೆ 10 ವರ್ಷವಾದರೂ ಇಲ್ಲಿಲ್ಲ. ನನ್ನ ಕಂದನಿಗೆ ಇನ್ನೂ ಐದು ದಾಟಿಲ್ಲ. ಅವನು ಹಾಗೆ... ಪೊಗದಸ್ತಾಗಿ ಬೆಳೆದು ನಿಂತಿದ್ದಾನಷ್ಟೇ ಎಂದು ಕಂಡಕ್ಟರಿಗೆ ದಬಾಯಿಸುವುದುಂಟು.
ಪಾಪ ಪಾಂಡು ಕಂಡಕ್ಟರ್ ಪೆಚ್ಚು ಮೋರೆ ಹಾಕಿಕೊಂಡು ಮಗುವಿನ ವಯಸ್ಸನ್ನು ಪ್ರೂವ್ ಮಾಡಲಾಗದೆ ಇತ್ತ ಇಲಾಖೆಗೂ ಅನ್ಯಾಯವಾಗದಂತೆ ಮಾಡಲು ಪೇಚಾಡುವ ದೃಶ್ಯ ಇಂದಿಗೂ ಕಂಡುಬರುತ್ತದೆ.
ಆದರೆ ನಮ್ಮ ಮೆಟ್ರೊನಲ್ಲಿ!? ಅದಕ್ಕೆ ಅವಕಾಶವೇ ಇಲ್ಲ. ಅಪ್ಪ-ಅಮ್ಮ ನಾಟಕ್ ಬಂದ್. ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಿಲ್ಲ ಅಂದರೆ ಖೇಲ್ ಖತಂ. ಮಗುವನ್ನು ಕಣ್ಣಳತೆಯಲ್ಲೇ ತೂಗುವ ನಮ್ಮ ಮೆಟ್ರೊ 'ಮಗು 90 ಸೆಂಟಿ ಮೀಟರ್ ಅಥವಾ 3 ಅಡಿಗಿಂತ ಹೆಚ್ಚು ಎತ್ತರವಿದ್ದರೆ ಆ ಮಗುವಿಗೆ ಟಿಕೆಟ್ ಪಡೆಯಲೇಬೇಕಾಗುತ್ತದೆ' ಎಂದು ಘೋಷಿಸಿದೆ.












Click it and Unblock the Notifications