ಒಂದೇ ಆರೋಪ ಆದರೆ 3ನೆ ಬಾರಿಗೆ ತಗಲಿಕೊಂಡ ಅಶೋಕ್

ಆದರೆ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಲು ಮಾತ್ರ ಅನುಮತಿ ನೀಡಿದ್ದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್, ಅಶೋಕ ಅವರಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಿರಲಿಲ್ಲ. 'ಅಶೋಕ್ ತಮಗೆ ನಿಷ್ಠರಾಗಿದ್ದಾರೆ. ಅವರಿಂದ ಒಂದಷ್ಟು ಕೆಲಸಗಳಾಗಬೇಕಿವೆ' ಎಂದು ದೂರಾಲೋಚನೆ ಮಾಡಿದ ಭಾರದ್ವಾಜ್, ಅಶೋಕ ವಿರುದ್ಧದ ದೂರಿಗೆ ಸೊಪ್ಪು ಹಾಕಲಿಲ್ಲ.
ನಂತರ ವಿಜಯನಗರದ ಮಂಜುನಾಥ್ ಎಂಬುವರು ರಾಜ್ಯಪಾಲರ ಅನುಮತಿ ಇಲ್ಲದೇ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೆಲವೇ ದಿನಗಳಲ್ಲಿ ಹೈಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸುವ ಮೂಲಕ ದೂರನ್ನು ವಾಪಸ್ ಪಡೆದಿದ್ದರು.
ಈಗ ಅದೇ ಆರೋಪಗಳಿಗೆ ಸಂಬಂಧಿಸಿದಂತೆ ಪತ್ರಕರ್ತ ಜಯಕುಮಾರ್ ಹಿರೇಮಠ ಎಂಬುವರು ಹಿರಿಯ ನ್ಯಾಯವಾದಿ ಎ.ಕೆ. ಸುಬ್ಬಯ್ಯ ಅವರ ಜತೆಗೂಡಿ ದೂರು ಸಲ್ಲಿಸಿದ್ದು, ಮೂರನೇ ಬಾರಿ ಪ್ರಕರಣ ಜೀವ ಪಡೆದುಕೊಂಡಿದೆ!












Click it and Unblock the Notifications