ಅಶೋಕ್ ಗೃಹಸಚಿವ ಸ್ಥಾನದಲ್ಲಿ ಮುಂದುವರಿಯುವುದು ಎಷ್ಟು ಸಮಂಜಸ?
ಬೆಂಗಳೂರು,
ಅ. 23: ಲೋಕಾಯುಕ್ತದ ಡಿವೈಎಸ್ಪಿ ಅಬ್ದುಲ್ ಅಹಮದ್ ಅವರು ತಮ್ಮದೇ ಇಲಾಖೆಯನ್ನು ನಿಯಂತ್ರಿಸುತ್ತಿರುವ ಸಚಿವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ! ಹಾಗೆ ನೋಡಿದರೆ, ಗುಪ್ತಚರ ವಿಭಾಗವನ್ನು ಹೊರತುಪಡಿಸಿ ಪೊಲೀಸ್ ಇಲಾಖೆಯ ಎಲ್ಲ ವಿಭಾಗಗಳೂ ಗೃಹ ಸಚಿವರ ಅಧೀನದಲ್ಲೇ ಬರುತ್ತವೆ. ಲೋಕಾಯುಕ್ತ ಪೊಲೀಸ್ ವಿಭಾಗವೂ ಅವರ ವ್ಯಾಪ್ತಿಯಲ್ಲೇ ಇದೆ ಎಂಬುದು ಗಮನಾರ್ಹ. id="toptextpromo">ಆದ್ದರಿಂದ,
ಸನ್ಮಾನ್ಯ ಅಶೋಕ್ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಉದ್ಭವಿಸಿದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯದ
ಇತಿಹಾಸದಲ್ಲಿ ಎರಡನೇ ಬಾರಿಗೆ ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಆರ್.ಎಲ್. ಜಾಲಪ್ಪ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ನಡೆದ ವಕೀಲ ರಶೀದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.











Click it and Unblock the Notifications