ಬೆಂಗಳೂರಲ್ಲಿ ವೇಶ್ಯಾವಾಟಿಕೆ : ಬಾಂಗ್ಲಾ ಹುಡುಗಿಯರು ಪಾರು

Prostitution racket busted in Bangalore
ಬೆಂಗಳೂರು, ಅ. 22 : ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಬಾಂಗ್ಲಾದೇಶದ ಮೂವರು ಯುವತಿಯರನ್ನು ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ನ ಮಹಿಳಾ ಮತ್ತು ಮಾದಕವಸ್ತು ವಿಭಾಗದ ಪೊಲೀಸರು ಪಾರು ಮಾಡಿದ್ದು, ಇಬ್ಬರನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಮನೆಯಲ್ಲಿ ಶನಿವಾರ ಬಂಧಿಸಿದ್ದಾರೆ.

ಬಂಧಿತರು ಕೂಡ ಬಾಂಗ್ಲಾದೇಶದವರಾಗಿದ್ದು ಅವರಲ್ಲಿ ಒಬ್ಬಳು ಮಹಿಳೆಯಿದ್ದಾಳೆ. ಅವರಿಂದ 5 ಸಾವಿರದ 40 ರು., ಮೂರು ಮೊಬೈಲ್, ಎರಡು ಪ್ಯಾನ್ ಕಾರ್ಡ್, ಹಣ ಸಂದಾಯ ಮಾಡಿದ ಐಸಿಐಸಿಐ ಬ್ಯಾಂಕ್ ರಸೀತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಲಿ ಅಕ್ಬರ್ ಮತ್ತು ರೂಪಾ ಬೇಗಂ ಅನೇಕ ವರ್ಷಗಳಿಂದ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದರು. ಕೆಲಸ ಕೊಡಿಸುವ ನೆಪವೊಡ್ಡಿ ಬಾಂಗ್ಲಾದೇಶದ ಬಿಥಿ, ಹಸೀನಾ ಮತ್ತು ಲಿಲ್ಲಿ ಎಂಬ ಮೂವರು ಯುವತಿಯರನ್ನು ಅನಧಿಕೃತ ದಾಖಲೆ ಸೃಷ್ಟಿಸಿ ಕರೆಸಿಕೊಂಡು ವೇಶ್ಯಾವಾಟಿಕೆ ಜಾಲದಲ್ಲಿ ಬೀಳಿಸಿದ್ದರು.

ವೇಶ್ಯಾವಾಟಿಕೆ ನಡೆಸುತ್ತಿರುವ ಖಚಿತ ಮಾಹಿತಿಯ ಮೇರೆಗೆ ಸಹಾಯಕ ಪೊಲೀಸ್ ಕಮಿಷನರ್ ಎಸ್ ವಿ ಗುಳೇದ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅವರನ್ನು ಬಲೆಗೆ ಕೆಡವಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+