ಸೋನಿಯಾಗೆ ಗಾಂಧಿಗೆ 36 ಸಾವಿರ ಕೋಟಿ ಲಂಚ

ನಗರದ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಡಾ. ಸ್ವಾಮಿ, ಸುಮಾರು 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಅರವತ್ತು ಸಾವಿರ ಕೋಟಿ ರೂಪಾಯಿಗೂ ಅಧಿಕ ಲಂಚ ಕೈಕೈ ಬದಲಾಗಿದೆ. ಲಂಚ ಬದಲಾಗಿದ್ದು ಬಹುಪಾಲು ಕೈ ಪಕ್ಷಕ್ಕೆ. ಇದರಲ್ಲಿ ಕರುಣಾನಿಧಿಗೆ 14 ಸಾವಿರ ಕೋಟಿ, ಎ ರಾಜಾ ಮತ್ತು ಚಿದಂಬರಂಗೆ ತಲಾ ಐದು ಸಾವಿರ ಕೋಟಿ ಲಂಚ ಸಂದಾಯವಾಗಿದೆ ಎಂದು ಟೀಕೆ ಮಾಡಿದ್ದಾರೆ.
ವಿದೇಶದಲ್ಲಿ ಇರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಮುಂದಿನ ಹತ್ತು ವರ್ಷಗಳ ಕಾಲ ಸಾರ್ವಜನಿಕರು ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. ಜನರಿಗೆ ಉತ್ತಮ ಮಟ್ಟದ ಮೂಲಭೂತ ಸೌಕರ್ಯ ಒದಗಿಸಬಹುದು. ನಿಯಮಬಾಹಿರವಾಗಿ ತರಂಗಾಂತರ ಮಾರಾಟ ಮಾಡಲು ಉಪಾಯ ನೀಡಿದ್ದೇ ಎ ರಾಜಾ ಎಂದು ಹೇಳಿಕೆ ನೀಡಿದ್ದಾರೆ.
ಕರ್ನಾಟಕದಲ್ಲೂ ಎಸ್ ಎಂ ಕೃಷ್ಣ ಮತ್ತು ಧರಂ ಸಿಂಗ್ ಮೇಲೆ ಅಕ್ರಮ ಗಣಿಗಾರಿಕೆ ಬಗ್ಗೆ ಆರೋಪ ಕೇಳಿ ಬರುತ್ತಿದೆ. ಅಗತ್ಯ ಬಿದ್ದರೆ ಈ ಸಂಬಂಧ ಕೂಡ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಡಾ. ಸ್ವಾಮಿ ಎಚ್ಚರಿಸಿದ್ದಾರೆ.












Click it and Unblock the Notifications