ಶಾಸಕ ಸಂಗಮೇಶ್ ಗೆ ತ್ವರಿತವಾಗಿ ಸಿಕ್ತು ಜಾಮೀನು

ಭದ್ರಾವತಿಯ ವಿವಾದಿತ ಶಾಸಕ ಕಾಂಗ್ರೆಸ್ಸಿನ ಬಿ.ಕೆ. ಸಂಗಮೇಶ್ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ತುತ್ತಾಗಿದ್ದರು. ಸಂಗಮೇಶ್ ಅವರನ್ನು ಗುರುವಾರ ಮಧ್ಯಾಹ್ನ ಭದ್ರಾವತಿಯ ಜೆಎಫ್ ಎಂಸಿ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಪೊಲೀಸ್ ಇನ್ಸ್‌ಪೆಕ್ಟರ್ ಪರುಶುರಾಮಪ್ಪ ಅವರು ನೀಡಿದ್ದ ದೂರನ್ನು ಆಲಿಸಿದ ನ್ಯಾಯಮೂರ್ತಿಗಳು ಶಾಸಕ ಸಂಗಮೇಶ್ ಗೆ ಜಾಮೀನು ನೀಡಿದ್ದಾರೆ.
ಶಾಸಕರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜತೆಗೆ ತಮ್ಮನ್ನು ಹಿಡಿದು ಎಳೆದಾಡಿದ್ದಾರೆ ಎಂದು ಇನ್ಸ್‌ಪೆಕ್ಟರ್ ಪರುಶುರಾಮಪ್ಪ ದೂರು ನೀಡಿದ್ದರು.
ಐಪಿಸಿ ಸೆಕ್ಷನ್ 143, 504, 353 ಹಾಗೂ 186ರ ಅಡಿ ಶಾಸಕ ಸಂಗಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.












Click it and Unblock the Notifications