ಶೋಭಾ ಕರಂದ್ಲಾಜೆ ಯುಪಿಸಿಎಲ್‌ ಕಂಪನಿಯ ಕೈಗೊಂಬೆ: ಜೆಡಿಎಸ್‌

shobha-karandlaje-upcl-puppet-jds-udupi
ಉಡುಪಿ, ಅ.19: ಇಂಧನ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಯುಪಿಸಿಎಲ್‌ ಕುರಿತಾಗಿ ತಪ್ಪು ನಡೆಯನ್ನು ಇಡುತ್ತಿದ್ದಾರೆ. ಅವರು ಜನಹಿತವನ್ನು ಅವಗಣಿಸಿ ಯುಪಿಸಿಎಲ್‌ ಕಂಪನಿಯ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಅವರು ಆರೋಪಿಸಿದ್ದಾರೆ.

ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿ ಸುತ್ತಲಿನ ಗ್ರಾಮಗಳ ಜನರನ್ನು ಸಂಕಷ್ಟಕ್ಕೀಡು ಮಾಡಿರುವ ಯುಪಿಸಿಎಲ್‌ ಪರ ವಹಿಸಿ ಸಿಎಂ ಮತ್ತು ಸಚಿವೆ ಶೋಭಾ ಜನತೆಗೆ ದ್ರೋಹವೆಸಗುತ್ತಿದ್ದಾರೆ. ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳುವವರೆಗೆ ಸ್ಥಾವರ ಮುಚ್ಚುವ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಯನ್ನು ಮರೆತು ಇದೀಗ ಕಂಪನಿಯ ಒತ್ತಡಕ್ಕೆ ಮಣಿದಿದ್ದಾರೆ.

ಅಲ್ಲದೆ ಎರಡನೇ ಹಂತಕ್ಕೆ ಒಪ್ಪಿಗೆ ನೀಡಲು ಮುಂದಾಗಿದ್ದಾರೆ. ತಜ್ಞರು, ಜಿಲ್ಲಾಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸಿ ಸ್ಥಾವರದಿಂದಾಗುತ್ತಿರುವ ಹಾನಿಯನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಜಿಲ್ಲಾಧಿಕಾರಿಗಳು ಮುಂದಾಗಿದ್ದರು.

ಆದರೆ ಸಚಿವೆ ಕರಂದ್ಲಾಜೆಯ ಒತ್ತಡಕ್ಕೆ ಮಣಿದು ಅಹವಾಲು ಸಭೆಯನ್ನು ಮಾಡದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಸಚಿವೆ ತಪ್ಪು ನಡೆಯನ್ನಿಟ್ಟಿದ್ದಾರೆ. ಪರಿಸರ ಮಾಲಿನ್ಯವನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವವರೆಗೆ ಯುಪಿಸಿಎಲ್‌ ಕಾರ್ಯಾರಂಭ ಮಾಡದಂತೆ ಸರಕಾರ ತುರ್ತು ಆದೇಶ ನೀಡಬೇಕು ಎಂದವರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+