ಮೆಟ್ರೋ ರೈಲಿಗೆ ಟಾಂಗ್ ಕೊಡಲು ಸೈಕಲ್ ಸಜ್ಜು

Cycle raid vs BMRCL
ಬೆಂಗಳೂರು, ಅ.19: ಬಹುನಿರೀಕ್ಷಿತ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಕ್ಕೆ ಕ್ಷಣಗಣನೆ ಆರಂಭಾಗಿದೆ. ಮೆಟ್ರೋ ರೈಲು ಸೇವೆಗೆ ಪೈಪೋಟಿ ನೀಡುವ ರೀತಿಯಲ್ಲಿ ಬಾಡಿಗೆ ಸೈಕಲ್ ವ್ಯವಸ್ಥೆವೊಂದು ಜಾರಿಗೊಂಡಿದೆ.

Automated Public Bicycle Sharing System (ATCAG)ಎಂಬ ಹೆಸರಿನ ವ್ಯವಸ್ಥೆಯನ್ನು ಶಾಸಕ ಎನ್ಎ ಹ್ಯಾರೀಸ್ ಅವರು ಉದ್ಘಾಟಿಸಿದ್ದಾರೆ.

ಬಿಎಂಟಿಸಿ ಹಾಗೂ ಮೆಟ್ರೋ ಕೈ ಕೊಡುವ ಕಡೆ ಎಟಿಸಿಎಜಿ ತನ್ನ ಚಕ್ರ ತಿರುಗಿಸುತ್ತಾ ಸಾಗಲು ಪಣ ತೊಟ್ಟಿದೆ.

ಬಿಎಂಟಿಸಿ, ಮೆಟ್ರೋ ರೈಲು ಹಾಗೂ ಆಟೋರಿಕ್ಷಾಗಳಿಗೆ ಪೈಪೋಟಿ ನೀಡುವ ಜೊತೆಗೆ ಪರಿಸರ ಪ್ರೇಮಿ ಸಾರಿಗೆ ಎಂಬ ಪ್ರಚಾರ ಕೂಡಾ ಗಿಟ್ಟಿಸುವ ಉದ್ದೇಶ ಎಟಿಸಿಎಜಿಗೆ ಇದೆ.

ಟೆಕ್ಕಿಗಳೇ ಟಾರ್ಗೆಟ್: ಎಟಿಸಿಎಜಿ ಸೌಲಭ್ಯ ಪಡೆಯುವ ಮುನ್ನ ನೋಂದಾಯಿಸಿಕೊಳ್ಳಬೇಕು. ನಂತರ ನಿಮಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ನಂತರ ಡಾಕ್ ಸ್ಟೇಷನ್ ಗೆ ತೆರಳಿ ಸೈಕಲ್ ಪಡೆದು ನಿಗದಿತ ಅವಧಿಯಲ್ಲಿ ಸಂಚಾರ ಮಾಡಬಹುದು.

ಸದ್ಯಕ್ಕೆ ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಮೂರು ತಿಂಗಳ ಅವಧಿವರೆಗೂ ಈ ವ್ಯವಸ್ಥೆ ನಗರದ ಮೂರು ಪ್ರದೇಶಗಳಲ್ಲಿ ಲಭ್ಯವಿರುತ್ತದೆ. 9 ಸೈಕಲ್ ಗಳ ಸ್ಟೇಷನ್ ಗಳು ಎಫ್ ಎಂ ಕಾರಿಯಪ್ಪ ಯುದ್ಧ ಸ್ಮಾರಕದ ಬಳಿ, ಶಂಕರ್ ನಾಗ್ ಥೇಟರ್ ಹಾಗೂ ಬೈಬಲ್ ಸೊಸೈಟಿ ಆಫ್ ಇಂಡಿಯಾ ಬಳಿ ಕಾಣಬಹುದು.

ಆರಂಭದಲ್ಲಿ ಒಂದು ಗಂಟೆ ಉಚಿತ ಸಂಚಾರ ನೀಡಲಾಗುವುದು. ನಂತರ ಪ್ರತಿಗಂಟೆಗೂ 10 ರೂ ಬೆಲೆ ತೆರಬೇಕಾಗುತ್ತದೆ. ಪ್ರತಿ 500 ಮೀಟರ್ ಸೈಕಲ್ ಸ್ಟೇಷನ್ ಆರಂಭಿಸುವ ಉದ್ದೇಶವನ್ನು ಎಟಿಸಿಎಜಿ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+