ಅತ್ಯಾಚಾರದ ಎಂಎಂಎಸ್ ಭೀತಿ ನೋ ಕಂಪ್ಲೈಂಟ್

rape video in Ludhiana
ಲೂಧಿಯಾನ, ಅ.17: ಕಳೆದ ಎರಡು ತಿಂಗಳಲ್ಲಿ ಅತ್ಯಾಚಾರ, ಎಂಎಂಎಸ್ ಹಂಚಿಕೆ ಘಟನೆಗಳು ಜನತೆಯನ್ನು ಘಾಸಿಗೊಳ್ಳುತ್ತಿದೆ. ಇತ್ತೀಚೆಗೆ ಮಹಿಳೆಯ ಸಾಮೂಹಿಕ ಅತ್ಯಾಚಾರ ವಿಡಿಯೋ ಚಿತ್ರೀಕರಣವಾಗಿದೆ. ಆದರೆ, ನತದೃಷ್ಟೆ ಅತ್ಯಾಚಾರಿಗಳಿಗೆ ಹೆದರಿ ದೂರು ನೀಡಲು ಹಿಂಜರೆದಿದ್ದಾಳೆ.

ಘಟನೆ ನಡೆದಿದ್ದು ಹೀಗೆ: ಕಳೆದ ವಾರ ಮಾರುಕಟ್ಟೆಗೆ ತರಕಾರಿ, ದಿನಸಿ ಖರೀದಿಸಲು ಹೋಗಿದ್ದ ಮಹಿಳೆಯನ್ನು ಕಾರಿನಲ್ಲಿ ಬಂದ ನಾಲ್ವರ ಗುಂಪೊಂದು ಎತ್ತಿಹಾಕಿಕೊಂಡು ದೂರದ ತೋಟದ ಮನೆಗೆ ಕರೆದೊಯ್ದಿದೆ.

ಒಬ್ಬೊಬ್ಬರಾಗಿ ಆಕೆ ಮೇಲೆ ಅತ್ಯಾಚಾರ ಎಸೆಗಿದ್ದು ಅಲ್ಲದೆ, ಮೊಬೈಲ್ ಮೂಲಕ ಹೀನ ಕೃತ್ಯದ ವಿಡಿಯೋ ಕೂಡಾ ತೆಗೆಯಲಾಗಿದೆ. ಕೊನೆಗೆ ಆಕೆಯನ್ನು ಸಿಟಿಗೆ ಕರೆದುಕೊಂಡು ಬಿಡಲಾಗಿದೆ.

ಘಟನೆಯಿಂದ ಮಾನಸಿಕವಾಗಿ ಜರ್ಜರಿತಳಾದ ಮಹಿಳೆ ಮೂರ್ನಾಲ್ಕು ದಿನವಾದರೂ ಪೊಲೀಸರಿಗೆ ದೂರು ನೀಡಿರಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೊರಟಾಗ,

ಬೆದರಿಕೆ, ಹಿಂಜರಿಕೆ: ಅತ್ಯಾಚಾರಿಗಳಿಂದ ಬೆದರಿಕೆ ಕರೆ ಬಂದಿದೆ. ನಿನ್ನ ರೇಪ್ ವಿಡಿಯೋ ಇಂಟರ್ ನೆಟ್ ನಲ್ಲಿ ಹರಿದಾಡ ಬಾರದು ಎಂದರೆ ಸುಮ್ಮನೆ ಮನೆಯಲ್ಲಿ ಬಿದ್ದಿರು. ನಾವು ಕರೆದಾಗ ಬಂದು ಸಹಕರಿಸು, ಇಲ್ಲದಿದ್ದರೆ ನೀನು ಠಾಣೆ ಮೆಟ್ಟಿಲೇರುತ್ತಿದ್ದಂತೆ ವಿಡಿಯೋ ಇಂಟರ್ ನೆಟ್ ನಲ್ಲಿ ಮೊಬೈಲ್ ಗಳಲ್ಲಿ ಹರಿದಾಡುತ್ತದೆ ಎಂದಿದ್ದಾರೆ.

ಕೊನೆಗೂ ಧೈರ್ಯ ಮಾಡಿ ನೆರೆ ಮನೆ ಅವರ ಸಹಾಯದಿಂದ ಮಹಿಳೆ ಪೊಲೀಸರ ಸಹಾಯ ಬೇಡಿದ್ದಾಳೆ. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಪೊಲೀಸರಿಗೆ ತಿಳಿಸಿದರೆ ಆರೋಪಿಗಳನ್ನು ಹಿಡಿಯಲು ಸಹಾಯವಾಗುತ್ತದೆ. ವಿಡಿಯೋ ಅಪ್ ಲೋಡ್ ಮಾಡಿಬಿಟ್ಟರೆ, ತೆಗೆದು ಹಾಕಲು ಸಮಯ ಹಿಡಿಯುತ್ತದೆ ಎಂದು ನಾಲ್ವರು ಆರೋಪಿಗಳನ್ನು ಹುಡುಕುತ್ತಿರುವ ಪಂಜಾಬ್ ಪೊಲೀಸರು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+