ಕುಮಾರಣ್ಣ, ಧರ್ಮಪತ್ನಿ ಅನಿತಾ ಜಾಮೀನು ವಿಚಾರಣೆ ಮುಂದೂಡಿಕೆ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜಂತಕಲ್ ಗಣಿ ಕಂಪನಿಯ ಗುತ್ತಿಗೆಯನ್ನು ಕಾನೂನುಬಾಹಿರವಾಗಿ ನವೀಕರಣ ಮಾಡಿದ್ದಾರೆ.
ಇನ್ನು, ಅವರ ಪತ್ನಿ ಅನಿತಾ ಅವರು ವಿಶ್ವಭಾರತಿ ಸಂಘದಿಂದ ಅಕ್ರಮ ನಿವೇಶನ ಪಡೆದಿದ್ದಾರೆ ಎಂದು ವಿನೋದ್ ಕುಮಾರ್ ಎಂಬುವವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಜ್ವರದ ನೆಪವೊಡ್ಡಿ ಅನಿತಾ ಕುಮಾರಸ್ವಾಮಿ ಇಂದು ಕೋರ್ಟಿಗೆ ಹಾಜರಾಗಿರಲಿಲ್ಲ. ಈ ಪ್ರಕರಣದಲ್ಲಿ ಜಾಮೀನು ಕೋರಿ ಕುಮಾರಸ್ವಾಮಿ ದಂಪತಿ ಲೋಕಾಯುಕ್ತ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಜಂತಕಲ್ ಕಂಪನಿಯ ಎಂಡಿ ವಿನೋದ್ ಗೋಯಲ್ ಸಹ ಜಾಮೀನು ಕೋರಿದ್ದಾರೆ.












Click it and Unblock the Notifications