ಪ್ರಿಯತಮನಿಗೆ ಬೆಂಕಿ ಹಚ್ಚಿದ ಬೆಂಗಳೂರು ಹುಡುಗಿ

ದೆಹಲಿ ಮೂಲದವಳಾದರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಅನುಶ್ರೀ ಕುಂದ್ರಾ (30) ಪರಾರಿಯಾಗಿದ್ದಾಳೆ. ಆಕೆ ಪ್ರೀತಿಸುತ್ತಿದ್ದ ನಿಮೇಶ್ ನಿನ್ಹಾ (32)ಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಆತನನ್ನು ಮದುವೆಯಾಗಬೇಕಿದ್ದ ಜೂಹಿ ಪ್ರಸಾದ್ (24) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಅನುಶ್ರೀ ಮತ್ತು ನಿಮೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಜಾತಿ ಅಡ್ಡಬಂದದ್ದರಿಂದ ಅನುಶ್ರೀ ಮನೆಯಲ್ಲಿ ಮದುವೆಗೆ ಪ್ರತಿರೋಧ ವ್ಯಕ್ತವಾಗಿದೆ. ನಂತರ, ನಿಮೇಶ್ ಮತ್ತು ಜೂಹಿ ನಿಶ್ಚಿತಾರ್ಥ ಜರುಗಿದೆ. ಇದನ್ನು ಪ್ರೇಮ ವಿರಹಿ ಅನುಶ್ರೀಗೆ ಸಹಿಸಲು ಸಾಧ್ಯವಾಗಿಲ್ಲ.
ಅವರನ್ನು ಕೊಲ್ಲಲು ನಿರ್ಧರಿಸಿಯೇ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದಾಳೆ ಅನುಶ್ರೀ. ವಾನವ್ಡಿಯಲ್ಲಿದ್ದ ಫ್ಲಾಟ್ ನಲ್ಲಿ ಮೂವರ ನಡುವೆ ವಾಗ್ವಾದ ಜರುಗಿದೆ. ಆ ಸಮಯದಲ್ಲಿ ಪೆಟ್ರೋಲು ಸುರುವಿ ಬೆಂಕಿ ಹಚ್ಚಿದ್ದಾಳೆ ಅನುಶ್ರೀ. ನಂತರ ತಪ್ಪಿಸಿಕೊಂಡಿದ್ದಾಳೆ. ಅನುಶ್ರೀ ದೆಹಲಿ ಮೂಲದವಳಾದ್ದರಿಂದ ಪೊಲೀಸರ ತಂಡವನ್ನು ಬೆಂಗಳೂರು ಮತ್ತು ದೆಹಲಿಗೆ ರವಾನಿಸಲಾಗಿದೆ.












Click it and Unblock the Notifications