ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಂಗ್ರೆಸ್ ಬ್ರಹ್ಮಾಂಡ ಭ್ರಷ್ಟಾಚಾರ: ಜನಮಾನಸದಲ್ಲಿ ಇನ್ನೂ ಹಸಿರಾಗಿಯೇ ಇದೆ'

By Srinath
|
Google Oneindia Kannada News

india-still-remembers-congress-corruption-modi
ಅಹಮದಾಬಾದ್, ಅ. 11: 1974 ಏನಾಯಿತೆಂದರೆ... ಸ್ವತಂತ್ರ ಭಾರತದಲ್ಲಿ ವ್ಯವಸ್ಥಿತ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಮೊದಲ ಬಾರಿಗೆ ಜೋರು ದನಿ ಕೇಳಿಬಂದಿದ್ದು 1974ರಲ್ಲಿ ಗುಜರಾತಿನಲ್ಲಿ. ಆ ಸಂದರ್ಭದಲ್ಲಿ ಕೇಂದ್ರ ಸರಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಪ್ರಬಲ ಧ್ವನಿ ಎತ್ತಲಾಗಿತ್ತು. ನವ ನಿರ್ಮಾಣ ಚಳವಳಿಯಿಂದಾಗಿ ಗುಜರಾತಿನಲ್ಲಿ ಕಾಂಗ್ರೆಸ್ಸೇತರ ಮೈತ್ರಿ ಸರಕಾರ ಆಳ್ವಿಕೆಗೆ ಬಂದಿತು.

1977ರಲ್ಲಿ ರಾಷ್ಟ್ರಮಟ್ಟದಲ್ಲಿ ಪುನರಾವರ್ತನೆ: ಗುಜರಾತಿನಲ್ಲಿ ಈ ಚಳವಳಿಯಿಂದ ಪ್ರೇರಣೆ ಪಡೆದು ಇಡೀ ದೇಶದಾದ್ಯಂತ ಭ್ರಷ್ಟಾಚಾರ ವಿರೋಧಿ ಕೂಗು ಮೊಳಗಲಾರಂಭಿಸಿತು. ಭ್ರಷ್ಟಾಚಾರ ವಿರೋಧಿ ಧ್ವನಿಯನ್ನು ಅಡಗಿಸಲು ಇಂದಿರಾ ಗಾಂಧಿ ಸರಕಾರ ತುರ್ತುಪರಿಸ್ಥಿತಿಯನ್ನೇ ಹೇರಿತು. ಆದಾಗ್ಯೂ ಜನದನಿ ಉಡುಗಲಿಲ್ಲ. ರಾಷ್ಟ್ರದಾದ್ಯಂತ ಕಾಂಗ್ರೆಸ್ ಹೇಳಹೆಸರಿಲ್ಲದೆ ಪತನಗೊಂಡಿತು. ಕೇಂದ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಅಧಿಕಾರದ ಚುಕ್ಕಾಣಿ ಹಿಡಿಯಿತು.

1989 ಭ್ರಷ್ಟಾಚಾರ ಭೂತ ಕಾಂಗ್ರೆಸ್ ಹೆಗಲೇರಿತು: ಇನ್ನು, 1989ರಲ್ಲಿ ಅದರದೇ ಆದ ಕಾರಣಗಳಿಂದಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿತು. ಆದರೆ ಭ್ರಷ್ಟಾಚಾರ ಭೂತ ಮತ್ತೆ ಅದರ ಹೆಗಲೇರಿತು. ಬೊಫೋರ್ಸ್ ಹಗರಣವು ರಾಜೀವ್ ಗಾಂಧಿ ನೇತೃತ್ವದ ಸರಕಾರಕ್ಕೆ ಮುಳುಗುನೀರು ತಂದಿತು. ಈಗಲೂ ಮತ್ತೆ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರ ಆಪಾದನೆಯಲ್ಲಿ ಹುದುಗಿಹೋಗಿದೆ.

English summary
In the backdrop of Lal Krishna Advaniji's 'Jan Chetna Yatra' Gujarat CM Narendra Modi has a written an open letter. In the letter Modi says that India still remembers Congress corruption. As such Advani yatra gets significance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X