ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ವಿರೋಧಿ ಕೂಗು: ಅಡ್ವಾಣಿ ರಥಯಾತ್ರೆಗೆ ವಿಶೇಷ ಮಹತ್ವ

By Srinath
|
Google Oneindia Kannada News

corruption-advani-yatra-significant-modi
ಅಹಮದಾಬಾದ್, ಅ. 11: ಈಗ ಮತ್ತೊಮ್ಮೆ ಒಂದು ಕಡೆಯಿಂದ ಭ್ರಷ್ಟಾಚಾರ ವಿರುದ್ಧ ವ್ಯಾಪಕ ಆಂದೋಲನ ನಡೆಯುತ್ತಿದೆ. ಯೋಗ ಗುರು ರಾಮದೇವ್ ಅವರು ದೇಶದಾದ್ಯಂತ ತಿರುಗಾಡಿ ಕಪ್ಪು ಹಣದ ವಿರುದ್ಧ ಸಮರ ವಾತಾವರಣ ನಿರ್ಮಿಸಿದ್ದಾರೆ. ಮತ್ತೊಂದೆಡೆ, ಹಿರಿಯಜ್ಜ ಸಮಾಜ ಸುಧಾರಕ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸ್ಪಷ್ಟ ರೂಪು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಅಡ್ವಾಣಿ ಅವರ ರಥಯಾತ್ರೆ ತುಂಬಾ ವಿಶೇಷ ಮಹತ್ವ ಪಡೆದುಕೊಳ್ಳುತ್ತದೆ. ವಿದೇಶಿ ಬ್ಯಾಂಕುಗಳಲ್ಲಿ ಜಮೆಯಾಗಿರಯುವ ಕಾಳಧನವನ್ನು ವಾಪಸ್ ತರಬೇಕೆಂಬುದು ಅಡ್ವಾಣಿ ಅವರ ಹಕ್ಕೊತ್ತಾಯವಾಗಿದೆ. ಅಡ್ವಾಣಿ ಅವರ ಭ್ರಷ್ಟಾಚಾರ ವಿರೋಧಿ ಕೂಗು ಸಹ ಜೋರಾಗಿಯೇ ಇದೆ. ಗಮನಾರ್ಹವೆಂದರೆ ಕಾಳಧನ ಮತ್ತು ಭ್ರಷ್ಟಾಚಾರ ವಿರುದ್ಧ ಸಮೂಹ ಪ್ರಜ್ಞೆ, ಜನ ಬೆಂಬಲ ವ್ಯಾಪಕವಾಗಿ ರೂಪಿತವಾಗುತ್ತಿದೆ.

ಇಂತಹ ನಿರಾಶಾದಾಯಕ ಪರಿಸ್ಥಿತಿಯಲ್ಲಿ ಕಾಳಧನ ಮತ್ತು ಭ್ರಷ್ಟಾಚಾರ ವಿರುದ್ಧ ಅಡ್ವಾಣಿ ಅವರ ಜನ ಚೇತನ ಯಾತ್ರೆ ನವ ಜಾಗೃತಿ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸವಿದೆ. ಜಯಪ್ರಕಾಶ ನಾರಾಯಣ್ ಅವರ ಹುಟ್ಟೂರಿನಿಂದ ಜೆಪಿ ಜಯಂತಿಯಂದು ಯಾತ್ರೆ ಆರಂಭ ಪಡೆಯುತ್ತಿರುವುದು ಅತ್ಯಂತ ಸೂಕ್ತವಾಗಿದೆ.

English summary
In the backdrop of Lal Krishna Advaniji's 'Jan Chetna Yatra' Gujarat CM Narendra Modi has a written an open letter. In the letter Modi feels as India is gripped by corruption- Advani yatra will be very significant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X