ಜೀವನದ ಸಂಧ್ಯಾಕಾಲದಲ್ಲಿ ಅಡ್ವಾಣಿ ಯಾತ್ರೆ ನಿಷ್ಫಲವಾಗದು

ಗೌರವಾನ್ವಿತ ಅಡ್ವಾಣಿ ಅವರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುವ ಸುಯೋಗ ಈ ಹಿಂದೆ ಒದಗಿಬಂದಿತ್ತು. ಆದರೆ ಅಷ್ಟೇ ಬೇಸರದ ಸಂಗತಿಯೆಂದರೆ ಕೆಲವು ಸ್ವಹಿತಾಸಕ್ತಿ ಶಕ್ತಿಗಳು ಇಂತಹ ಸಂಬಂಧ ಬಗ್ಗೆ ಇಲ್ಲಸಲ್ಲದ ಗಾಳಿಸುದ್ದಿಯನ್ನು ಹಬ್ಬಿದ್ದವು.
ಅಡ್ವಾಣಿಜೀ ಅವರು ದೇಶ ಸೇವೆಯಲ್ಲಿ ತಮ್ಮ ಇಡೀ ಜೀವನವನ್ನು ಸವೆದಿದ್ದಾರೆ. 60 ವರ್ಷಗಳ ಸೇವೆಯನ್ನು ದೇಶಕ್ಕಾಗಿ ಧಾರೆಯೆರೆದಿದ್ದಾರೆ. ಇದರಲ್ಲಿ ಶೇ. 90 ರಷ್ಟು ಕಾಲ ವಿರೋಧ ಪಕ್ಷದ ಸಕ್ರಿಯ ಸದಸ್ಯರಾಗಿ ಕಳೆದಿದ್ದಾರೆ. ಅಂತಹುದರಲ್ಲಿ ಅಧಿಕಾರಕ್ಕಾಗಿ ಯಾತ್ರೆ ಕೈಗೊಂಡಿದ್ದಾರೆ ಎಂದು ಇಂತಹ ಜನನಾಯಕನ ಬಗ್ಗೆ ಅಪಶೃತಿ ಹಾಡುತ್ತಿರುವವರ ಬಗ್ಗೆ ಕನಿಕರ ಮೂಡುತ್ತದೆ.
ಖಂಡಿತ, ಅಡ್ವಾಣಿಜೀ ಅವರ ಜನ ಚೇತನ ಯಾತ್ರೆ ಭಾರತದ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಜೀವನದ ಸಂಧ್ಯಾಕಾಲದಲ್ಲಿ ಅಡ್ವಾಣಿ ಅವರು ಕೈಗೊಂಡಿರುವ ಮಹತ್ ಯಾತ್ರೆ ನಿಷ್ಫಲವಾಗುತ್ತದೆ ಎಂದೆನಿಸದು.












Click it and Unblock the Notifications