2ಜಿ ನಂತರ ಡಿಟಿಎಚ್ ಸೇವೆ ಮೇಲೆ ಸಿಬಿಐ ಕಣ್ಣು

ಡೈರೆಕ್ಟ್ ಟು ಹೋಮ್ (ಡಿಟಿಎಚ್) ಪ್ರಸಾರಕರಿಗೆ ನೀಡಲಾದ ಸ್ಪೆಕ್ಟ್ರಂ ಬಗ್ಗೆ ತನಿಖೆ ಆರಂಭಿಸಲಾಗಿದೆ. 2ಜಿ ಹಗರಣಕ್ಕೆ ಸಂಬಂಧಿಸಿ ತನಿಖೆ ಎದುರಿಸುತ್ತಿರುವ ಕೆಲವು ಟೆಲಿಕಾಂ ಕಂಪೆನಿಗಳು ಡಿಟಿಎಚ್ ಸೇವೆಯನ್ನೂ ಪಡೆದುಕೊಂಡಿರುವುದರಿಂದ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಬಿಐ ಹೇಳಿದೆ.
ಡಿಶ್ ಟಿವಿ ಇಂಡಿಯಾ ಲಿಮಿಟಡ್, ರಿಲಯನ್ಸ್ ಬಿಗ್ ಟಿವಿ ಪ್ರೈವೇಟ್ ಲಿ, ಭಾರ್ತಿ ಮಲ್ಟಿ ಮೀಡಿಯಾ ಲಿಮಿಟಡ್, ಭಾರತಿ ಬಿಝ್ನೆಸ್ ಚಾನೆಲ್ ಪ್ರೈವೇಟ್ ಲಿಮಿಟಡ್, ದೂರದರ್ಶನ, ಸನ್‌ಡೈರೆಕ್ಟ್ ಟಿವಿ ಪ್ರೈವೇಟ್ ಲಿಮಿಟಡ್ ಮತ್ತು ಟಾಟಾ ಸ್ಕೈ ಲಿ. ಗಳಿಗೆ ಮಾಹಿತಿ ನೀಡುವಂತೆ ಸಿಬಿಐ ನಿರ್ದೇಶನ ನೀಡಿದೆ.
ಟಾಟಾಗೂ ಬಂತು ಕುತ್ತು: 2ಜಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಸನ್ ನೆಟ್ವರ್ಕ್ ಸಹ ಡಿಟಿಎಚ್ ಸೇವೆಯನ್ನು ಒದಗಿಸುತ್ತಿದೆ.
ಎಂ ಕರುಣಾನಿಧಿ ಪುತ್ರಿ ಕನಿಮೋಳಿ ಮಾಜಿ ಹಾಗೂ ಟೆಲಿಕಾಂ ಸಚಿವ ಎ. ರಾಜಾ ಜೊತೆಗೆ ಕೈಜೋಡಿಸಿ ಟಾಟಾ ಸ್ಕೈ ಡಿಟಿಎಚ್ ಸೇವೆ ಆರಂಭಕ್ಕೆ ಟಾಟಾ ಸಂಸ್ಥೆ ಚಾಲನೆ ನೀಡಿದೆ ಎಂಬ ಆರೋಪವೂ ಇದೆ.












Click it and Unblock the Notifications