ದುರ್ಗಾಪೂಜೆ ವೇಳೆ ಡ್ರಗ್ಸ್ ನೀಡಿ, ಕಾರಿನಲ್ಲಿ ಸ್ನೇಹಿತೆಯ ಅತ್ಯಾಚಾರ

ಅತ್ಯಾಚಾರಕ್ಕೊಳಗಾದ ಮಹಿಳೆಯು ಮೂಲತಃ ಹರಿಯಾಣಾದ ಪಾಣಿಪತ್ ನವರು. ಉತ್ತರ ದೆಹಲಿಯ ರೋಹಿಣಿ ಸೆಕ್ಟರ್ 24ರಲ್ಲಿ ವಾಸವಾಗಿದ್ದರು. ಆಕೆಯ ಪತಿ ಸೇಬಿನ ವ್ಯಾಪಾರಿತಾಗಿದ್ದು, ವ್ಯಾಪಾರ ನಿಮಿತ್ತ ಹಿಮಾಚಲ ಪ್ರದೇಶಕ್ಕೆ ಹೋಗಿದ್ದಾಗ ಈ ದುರ್ಘಟನೆ ನಡೆದಿದೆ.
ಮನೆ ಸಮೀಪ ದುರ್ಗಾ ಪೂಜೆ ನಡೆಯುತ್ತಿದೆ. ನನ್ನ ಪತಿಯೂ ಇಲ್ಲ. ನೀನು ಬಾ ಎಂದು ಮಹಿಳೆಯು ತನ್ನ ಗೆಳೆಯ 30 ವರ್ಷದ ಸಂಜು ಅಲಿಯಾಸ್ ಟಿಂಕುಗೆ ಆಹ್ವಾನ ನೀಡಿದ್ದೇ ಯಡವಟ್ಟಾಗಿದೆ. ಇದೇ ಸುಸಂದರ್ಭ ಎಂದು ಬಗೆದ ಸಂಜು ಅತ್ಯಾಚಾರವೆಸಗಿದ್ದಾನೆ.
ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ದ ಸಂಜು ದಾರಿ ಮಧ್ಯೆ ಆಕೆಗೆ ಕೋಲ್ಡ್ ಡ್ರಿಂಕ್ಸ್ ನೀಡಿದ್ದಾನೆ. ಆದರೆ ಪಾನೀಯದಲ್ಲಿ ಪ್ರಜ್ಞೆ ತಪ್ಪುವಂತಹ ರಸಾಯನಿಕ ಬೆರೆಸಿದ್ದ. ಸ್ನೇಹಿತೆ ಅರೆ ಪ್ಞಜ್ಞಾವಸ್ಥೆ ತಲುಪುತ್ತಿದ್ದಂತೆ ಸಂಜು ಕಾರನ್ನು ನಿರ್ಜನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ, ಕಾರಿನಲ್ಲಿ ರೇಪ್ ಮಾಡಿದ್ದಾನೆ. ಬಳಿಕ ದುರುಳ ಸಂಜು ಆಕೆಯನ್ನು ಮನೆಯ ಸಮೀಪ ಪೊದೆಯಲ್ಲಿ ಎತ್ತಿಹಾಕಿ, ಜಾಗ ಖಾಲಿ ಮಾಡಿದ್ದಾನೆ.
ದಾರಿಹೋಕರು ಪೊದೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯನ್ನು ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಯ ಬಳಿಕ ಪ್ರಜ್ಞೆ ಮರಳುತ್ತಿದ್ದಂತೆ ಮಹಿಳೆಯು ಪೊಲೀಸರಿಗೆ ಘಟನೆಯ ವೃತ್ತಾಂತವನ್ನು ವಿವರಿಸಿದ್ದಾರೆ.
ಮಹಿಳೆಯ ಹೇಳಿಕೆ ಮತ್ತು ವೈದ್ಯಕೀಯ ವರದಿಯನ್ನಾಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯ ಗಂಡನಿಗೆ ಮಾಹಿತಿ ನೀಡಿದ್ದಾರೆ.












Click it and Unblock the Notifications