'ಲೋಕ ಸೇವಕ' ಕೃಷ್ಣ ಮನೆಯಲ್ಲಿ ಸಿಕ್ತು 6 ಲಕ್ಷ ನಗದು: ಶಂಕರ ಬಿದರಿ

ಆದರೆ 'ಈ 5 ಲಕ್ಷ ರುಪಾಯಿ 'ಲೋಕ ಸೇವಕ' ಕೃಷ್ಣನ ಭ್ರಷ್ಟಾಚಾರದ ಪಳೆಯುಳಿಕೆಯಂತಿದೆ. ಎಷ್ಟೋ ಮಂದಿ ನಿರುದ್ಯೋಗಿಗಳ ಹೊಟ್ಟೆಯ ಮೇಲೆ ಹೊಡೆದು ಕೃಷ್ಣ ಸಾಕಷ್ಟು ದುಡ್ಡು ಮಾಡಿದ್ದಾನೆ. ಆರಂಭದಲ್ಲೇ ಬಂಧಿಸಿದ್ದರೆ ಲಕ್ಷಗಳಲ್ಲ, ಕೋಟಿಗಳು ಸಿಗುತ್ತಿದ್ದವು. ಆದರೂ ಈ ಖದೀಮನಿಗೆ ಈಗಲಾದರೂ ಶಿಕ್ಷೆಯಾಗುತ್ತಿದೆಯಲ್ಲ ಎಂಬ ಸಮಾಧಾನ ಇದೆ' ಎಂದು ಕೃಷ್ಣನ ಭ್ರಷ್ಟಾಚಾರದ ಸಂತ್ರಸ್ತರೊಬ್ಬರು ಛೀಮಾರಿ ಹಾಕಿದ್ದಾರೆ.
1996, 1998 ಮತ್ತು 2004ರಲ್ಲಿ ನಡೆದ ಕೆಪಿಎಸ್ಸಿ ನೇಮಕ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂಬುದು ರಾಜ್ಯ ಸರಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಕೆಕೆ ಮಿಶ್ರಾ ಅವರು ನೀಡಿದ್ದ ವರದಿಯಲ್ಲೇ ಸಾಬೀತಾಗಿತ್ತು.
ಸಿಐಡಿ ಮೂಲಗಳ ಪ್ರಕಾರ ಸಂದರ್ಶನಕ್ಕೆ ಬಂದ ಯಾವ ಗ್ರೇಡ್ ನಿಡಬೇಕು ಎಂಬುದರ ಬಗ್ಗೆ ಯಾವುದೇ ಎಗ್ಗುಸಿಗ್ಗು ಇಲ್ಲದೆ ರಾಜಾರೋಷವಾಗಿ ಸ್ವತಃ ಕೃಷ್ಣ ತಮ್ಮ ಹಸ್ತಾಕ್ಷರದಲ್ಲಿ ಬರೆದು ಸಹಿ ಹಾಕಿದ್ದಾರೆ. ನಿರ್ದಿಷ್ಟ ಅಭ್ಯರ್ಥಿಗೆ ಎ, ಇನ್ನೊಬ್ಬರಿಗೆ ಬಿ, ಮತ್ತೊಬ್ಬರನ್ನು ಎ ಗ್ರೇಡ್ ನಿಂದ ತೆಗೆದುಹಾಕಿ ಎಂದು ಷರಾ ಬರೆದು ಸಹಿ ಹಾಕಿದ್ದಾನೆ ಈ ಪುಣ್ಯಾತ್ಮ. ಹೀಗಾಗಿ ಕೃಷ್ಣ ಕೃಷ್ಣನ ಜನ್ಮಸ್ಥಳಕ್ಕೆ ತಲುಪಲಿಕ್ಕೆ ಕೆಲವೇ ದಿನ ಬಾಕಿಯಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications