ಕೃಷ್ಣಗೆ ತಾತ್ಕಾಲಿಕ ಜಾಮೀನು: ಭ್ರಷ್ಟರಿಗೆ ಮಾನವೀಯತೆಯ ಅನುಕಂಪ ಏಕೆ?

ಆದರೆ 'ಭ್ರಷ್ಟರಿಗೆಲ್ಲ ಮಾನವೀಯತೆ, ಅನುಕಂಪ ದಯಪಾಲಿಸುವ ಜರೂರತ್ತು ಏನಿದೆ?' ಎಂದು ನಾಡಿನ ಪ್ರಾಜ್ಞಾವಂತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅ.12ರಂದು ಕೃಷ್ಣ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅಂದು ಕೃಷ್ಣ ಮನೆಗಾ, ಸೆರೆ ಮನೆಗಾ? ಎಂಬುದು ನಿರ್ಧಾರವಾಗಲಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಹಮ್ಮದ್ ಅನ್ವರ್ ಅವರು ಪ್ರಕರಣದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ತನಿಖಾಧಿಕಾರಿ ಸಿಐಡಿ ಅಧಿಕಾರಿ ಪದ್ಮನಯನ ಅವರು ಅ. 4ರಂದೇ ವಿಚಾರಣೆಗೆ ಹಾಜರಾಗುಂತೆ ಕೃಷ್ಣಗೆ ನೋಟಿಸ್ ನೀಡಿದ್ದರು. ಆದರೆ ಅಂದು ಖಾಸಗಿ ಕೆಲಸ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕೃಷ್ಣ ನುಣುಚಿಕೊಂಡಿದ್ದರು.
ಆದ್ದರಿಂದ ಶುಕ್ರವಾರ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಬೆಳಿಗ್ಗೆ 10.30ರ ಸುಮಾರಿಗೆ ಪದ್ಮನಯನ ಅವರ ಕಚೇರಿಯಲ್ಲಿ ಕೃಷ್ಣನ ದರ್ಶನವಾಗುತ್ತಿದ್ದಂತೆ ಸಿಐಡಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಕೆಲ ಕಾಲ ವಿಚಾರಣೆ ನಡೆಸಿ, ಮಧ್ಯಾಹ್ನದ ವೇಳೆಗೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದರು.












Click it and Unblock the Notifications