ಲಿಫ್ಟ್ ನಲ್ಲಿ ಮಹಿಳೆ ಭೀಕರ ಕೊಲೆ, ವಾಚ್ಮನ್ ಎಸ್ಕೇಪ್

ಕುಮಾರಪಾರ್ಕ್ ನಲ್ಲಿರುವ ಪೋಲೋ ಗಾರ್ಡನ್ ಅಪಾರ್ಟ್ ಮೆಂಟ್ ನಲ್ಲಿ ಈ ಭೀಕರ ಹತ್ಯೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಅನುಸೂಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲ ಎಂದು ತಿಳಿದು ಬಂದಿದೆ
ಅನುಸೂಯ ಅವರು ತಮ್ಮ ಮನೆಗೆ ತೆರಳಲು ಲಿಫ್ಟ್ ಹತ್ತಿದ್ದನ್ನು ನೋಡಿದ ಅಸ್ಸಾಂ ಮೂಲದ ವಾಚ್ ಮನ್ ಅಶ್ರಫ್ ಆಕೆಯನ್ನು ಹಿಂಬಾಲಿಸಿದ್ದಾನೆ. ಲಿಫ್ಟ್ ನೊಳಗೆ ನುಗ್ಗಿದ ಅಶ್ರಫ್ ಆಕೆ ಮೇಲೆ ಹಲ್ಲೆ ಮಾಡಿ, ಮಾನಭಂಗಕ್ಕೂ ಯತ್ನಿಸಿದ ಶಂಕೆ ವ್ಯಕ್ತವಾಗಿದೆ.
ಮೂರನೆ ಮಹಡಿಗೆ ಬಂದಾಗ ಲಿಫ್ಟ್ ಡೋರ್ ತೆರೆದು ಕೊಂಡಿದೆ ಆಗ ಅಶ್ರಫ್ ಹೊಸ ಚಾಕು ತೆಗೆದುಕೊಂಡು ಮಹಿಳೆಯನ್ನು ಇರಿದು ಕೊಂದಿದ್ದಾನೆ.
'ಅಶ್ವಥ್ ಚಾಕು ಹಿಡಿದುಕೊಂದು ಓಡಿದ, ನಮಗೆ ನಂಬೋಕೆ ಆಗುತ್ತಿಲ್ಲ. ಗುರುವಾರ ವಿಜಯದಶಮಿ ಹಬ್ಬ ಆಚರಿಸಿ, ಹೋಮ ಮಾಡಿದ್ದರು. ಬ್ಯಾಂಕ್ ಸಹದ್ಯೋಗಿಗಳು ಎಲ್ಲರೂ ಆಗಮಿಸಿದ್ದರು. ನಮಗೆ ನಿಜಕ್ಕೂ ಭಯವಾಗಿದೆ' ಎಂದು ಆರೋಪಿಯನ್ನು ಗುರುತಿಸುವ ನೆಲಮಹಡಿ ಮನೆಯವರು ಹೇಳಿಕೆ ನೀಡಿದ್ದಾರೆ.
ಶೇಷಾದ್ರಿಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಅಶ್ರಫ್ ಹುಡುಕಾಟದಲ್ಲಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಅಶ್ವಥ್ ಹಾಗೂ ಕುಮಾರಕೃಪಾ ಬ್ರಾಂಚ್ ನ ಎಸ್ ಬಿಐ ಉದ್ಯೋಗಿ ಅನುಸೂಯ ನಡುವೆ ಯಾವುದೇ ವ್ಯಾಜ್ಯ ನಡೆದ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications