ಕುಮಾರಣ್ಣನ ಧರ್ಮಪತ್ನಿ ಜನಾ ರೆಡ್ಡಿಗಿಂತ ಹೆಚ್ಚು ಸಿರಿವಂತೆ!

ಏಕೆಂದರೆ ಲೇಡೀಸ್ ಫಸ್ಟ್ ಎಂಬ ಹಕ್ಕಿಗೆ ಯಾವುದೇ ಚ್ಯುತಿ ಬಾರದಂತೆ ದೊರೆಸಾನಿಯೊಬ್ಬರು ರಾಜ್ಯದ ಶ್ರೀಮಂತೆ ಎಂಬ ಪಟ್ಟ ಗಿಟ್ಟಿಸಿದ್ದಾರೆ. ಅವರೇ ನಮ್ಮ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ.
ಹೌದು, ಅನಿತಾರ ಒಟ್ಟು ಅಧಿಕೃತ ಆಸ್ತಿ ಮೊತ್ತ 160 ಕೋಟಿ ರುಪಾಯಿ. ಶಾಸಕಿಯಾಗಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಆಸ್ತಿ ವಿವರ ದಾಖಲೆಗಳನ್ನು ಪರಿಶೀಲಿಸಿದಾಗ ಈ ಅಂಶ ದೃಢಪಟ್ಟಿದೆ. ಇಲ್ಲಿ ಒಂದು ಅಂಶ ಸ್ಪಷ್ಟಪಡಿಸುವುದಾದರೆ ಬಳ್ಳಾರಿಯ ಜನಾ ರೆಡ್ಡಿ ಅಧಿಕೃತ ಾಸ್ತಿ ಲೋಕಾಐಉಕ್ತ ದಾಖಲೆಗಳ ಪ್ರಕಾರ ಕೇವಲ 144 ಕೋಟಿ ರು.
ಕುತೂಹಲಕಾರಿ ಸಂಗತಿಯೆಂದರೆ 2009-10ರಲ್ಲಿ ಶಾಸಕಿ ಅನಿತಾರ ಆಸ್ತಿ ಮೊತ್ತ 51.22 ಕೋಟಿ ರು. ಆದರೆ 2010-11ನೇ ಸಾಲಿಗೆ ಈ ಮೊತ್ತ ದಿಢೀರನೆ 160 ಕೋಟಿ ರು. ಗೆ ಜಿಗಿದಿದೆ. ದಿನಗೂಲಿ ಮುಖ್ಯಮಂತ್ರಿಗಳ ನಾಡಿನಲ್ಲಿ ಇಂತಹ ಅದ್ಭುತಗಳೂ ಘಟಿಸುತ್ತಿರುತ್ತವೆ. ಅಂದಹಾಗೆ, ಕಳೆದ ಆಗಸ್ಟ್ ತಿಂಗಳಲ್ಲಿ ಅನಿತಾ ಈ ಆಸ್ತಿ ವಿವರಗಳ ಅಫಡವಿಟ್ ಸಲ್ಲಿಸಿದ್ದಾರೆ.
1,300 ಗ್ರಾಂ ಚಿನ್ನ, 40 ಕ್ಯಾರೆಟ್ ವಜ್ರ, 17 ಕೆಜಿ ಬೆಳ್ಳಿ ಅನಿತಾ ಹೆಸರಿನಲ್ಲಿದೆ. ಜತೆಗೆ, 37,98,84,667 ರುಪಾಯಿ ಸಾಲದ ಹೊರೆಯನ್ನೂ ಈ ಜಾತ್ಯತೀತ ಜನತಾದಳದ ನಾಯಕಿ ಹೊತ್ತಿದ್ದಾರೆ. ಇವರ ಸಾಲದಿಂದ ಉಪಕೃತರಾದವರು ಬೇರಾರೂ ಅಲ್ಲ; ಸ್ವತಃ ಅಮ್ಮ, ಗಂಡ, ಮಗ...ಇವರೇ.












Click it and Unblock the Notifications