ಗಾಂಧಿ ಜಯಂತಿಗೆ ಗುಂಡು ತುಂಡು ಭರ್ಜರಿ ಮಾರಾಟ

ದೇಶಾದ್ಯಂತ ಗಾಂಧಿ ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತಿರಬೇಕಾದರೆ ಈ ತಾಲೂಕಿನಲ್ಲಿ ಮಾತ್ರ ಗುಂಡು ತುಂಡು ವಹಿವಾಟು ದೈನಂದಿನ ದಿನದಂತೆ ಸಾಗಿದ್ದು ಜಿಲ್ಲಾಡಳಿತ ಏನು ಮುಂಜಾಗರಿಕೆ ಕ್ರಮ ತೆಗೆದುಕೊಂಡಿತ್ತು ಎನ್ನುವುದೇ ಅರ್ಥವಾಗದ್ದು.
ತಾಲೂಕು ಮಂಡಳಿ ಮತ್ತು ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ. ಇದಕ್ಕೆ ಕಡಿವಾಣ ಹಾಕುವವವರೇ ಇಲ್ಲದಂತಾಗಿದೆ. ಇದೊಂದು ಅವಮಾನಕರ ಕೃತ್ಯ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿಯನ್ನು ಅವಮಾನಿಸಿದಂತೆ ಎಂದು ಜಿಲ್ಲಾ ಪ್ರಗತಿಪರ ಚಿಂತಕರು ದೂರಿದ್ದಾರೆ.
ಗಾಂಧಿ ಜಯಂತಿಯಂದು ಮದ್ಯ ಮಾರಾಟ ಮತ್ತು ಪ್ರಾಣಿ ಹಿಂಸೆ ನಿಷೇಧ ಎನ್ನುವುದು ಬಹಳ ಹಿಂದಿನ ಸರಕಾರದ ಸುತ್ತೋಲೆ. ಈ ಆದೇಶ ಉಲ್ಲಂಘನೆ ಬರೀ ಶ್ರೀನಿವಾಸಪುರ ತಾಲೂಕಿಗೆ ಮಾತ್ರ ಮೀಸಲಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಕೂಡ, ರಾಜಾರೋಷವಾಗಿ ನಡೆಯದಿದ್ದರೂ ಹಿಂಬಾಗಿಲಿಂದ ಮದ್ಯ ಮಾರಾಟ ನಡೆಯುತ್ತಲೇ ಇರುತ್ತದೆ. ಈ ಘಟನೆ ಬಗ್ಗೆ ನಮ್ಮ ಅಬಕಾರಿ ಸಚಿವರು ಏನಂತಾರೋ?












Click it and Unblock the Notifications