ಕೊಪ್ಪಳ ಉಪಚುನಾವಣೆ: ಮತ ಎಣಿಕೆ ಸಪ್ಪಳ ಜೋರು

ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿದ್ದು ಬಿಜೆಪಿಯ ಕರಡಿ ಸಂಗಣ್ಣ, ಕಾಂಗ್ರೆಸ್‌ನ ಬಸವರಾಜ ಹಿಟ್ನಾಳ, ಜೆಡಿಎಸ್‌ನ ಪ್ರದೀಪಗೌಡ ಮಾಲಿಪಾಟೀಲ ಪ್ರಮುಖ ಸ್ಪರ್ಧಿಗಳು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿ ತೀವ್ರ ಜಿದ್ದಾಜಿದ್ದಿ ಉಂಟಾಗಿದ್ದು, ಕೊಪ್ಪಳದ ಜನ ಯಾರಿಗೆ ಆಶೀರ್ವದಿಸಿದ್ದಾರೆ ಎಂಬುದು ಒಂದೆರಡು ಗಂಟೆಗಳಲ್ಲಿ ಬಹಿರಂಗಗೊಳ್ಳಲಿದೆ. ತಾಜಾ ಫಲಿತಾಂಶವನ್ನು ಕ್ಷಣಕ್ಷಣಕ್ಕೂ ಒದಗಿಸಲು 'ದಟ್ಸ್ ಕನ್ನಡ' ಸನ್ನದ್ಧವಾಗಿದೆ.
ರಾಜ್ಯದ ಚುನಾವಣಾ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಮತ ಎಣಿಕೆ ಕಾರ್ಯದ ಮೇಲೆ ನಿಗಾ ಇಡಲು ಪ್ರತಿ ಟೇಬಲ್‌ಗೆ ಒಂದರಂತೆ ಒಟ್ಟು 14 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾಲೇಜಿನ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 14 ಮಂದಿ ಅಭ್ಯರ್ಥಿಗಳು ಕಣದಲ್ಲಿ: ಕರಡಿ ಸಂಗಣ್ಣ (ಬಿಜೆಪಿ), ಪ್ರದೀಪ್ ಗೌಡ (ಜೆಡಿಎಸ್), ಬಸವರಾಜ ಹಿಟ್ನಾಳ್ (ಕಾಂಗ್ರೆಸ್), ಶರಣಪ್ಪ ಗೌಡ (ಆರ್ ಪಿಐ), ಎಹಸಾನುಲ್ಲಾ ಪಟೇಲ್ (ಪಕ್ಷೇತರ), ನಿರ್ಮಲ ಮಲ್ಲಿಕಾರ್ಜುನ (ಪ), ಕರಡಿ ಬಸವರಾಜ (ಪ), ಮನ್ಸೂರ್ ಬಾಷಾ (ಪ), ಕರಾಟೆ ವೌನೇಶ್ (ಪ), ಯಮನೂರಪ್ಪ ಮರಿಯಪ್ಪ (ಪ), ರಾಮುಲು (ಪ), ವಿಠ್ಠಪ್ಪ ಗೋರಂಟ್ಲಿ (ಪ), ಸಣ್ಣ ವೌಲಸಾಬ (ಪ) ಹಾಗೂ ಹಿರೇಮಠ (ಪ).












Click it and Unblock the Notifications