ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಛಾಯಾಗ್ರಾಹಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

By Bm Lavakumar
|
Google Oneindia Kannada News

Photo by SR Madhusudhan, Andolan, Mysore
ಮೈಸೂರು, ಸೆ. 26 : ಮೃಗಾಲಯದ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರಮಟ್ಟದ ವನ್ಯಜೀವಿ ವಿಭಾಗದ ಛಾಯಾಚಿತ್ರ ಸ್ಪರ್ಧೆಯಲ್ಲಿ ವನ್ಯಜೀವಿ ವಿಭಾಗದಲ್ಲಿ ಮತ್ತು ಮೃಗಾಲಯ ವಿಭಾಗದಲ್ಲಿ ಮೈಸೂರಿನ ಛಾಯಾಗ್ರಾಹಕರಿಗೆ ರಾಷ್ಟ್ರಮಟ್ಟದ ಗೌರವ ಸಂದಿದೆ.

ವನ್ಯಜೀವಿ ವಿಭಾಗದಲ್ಲಿ ಆಂದೋಲನ ಪತ್ರಿಕೆಯ ಛಾಯಾಗ್ರಾಹಕ ಎಸ್.ಆರ್.ಮಧುಸೂದನ್ ಅವರ ಮೈಸೂರು ಬಳಿಯ ನಗುವಿನಹಳ್ಳಿಯಲ್ಲಿ ಕಿಂಗ್‌ಫಿಶರ್ ಪಕ್ಷಿಯೊಂದು ಮರಿಗೆ ಗುಟುಕು ನೀಡುವ ಛಾಯಾಚಿತ್ರಕ್ಕೆ ಹಾಗೂ ಮೃಗಾಲಯ ವಿಭಾಗದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಸಿಂಹ ಸಿಂಹಣಿಗಳ ಛಾಯಾಚಿತ್ರಕ್ಕೆ ವಿಜಯಕರ್ನಾಟಕದ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆರವರಿಗೆ ದ್ವಿತೀಯ ಬಹುಮಾನ ದೊರೆತಿದೆ.

ಮೃಗಾಲಯ ಹಾಗೂ ವನ್ಯಜೀವಿ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ರಾಷ್ಟ್ರದಾದ್ಯಂತ ಸಾವಿರಾರು ಛಾಯಾಗ್ರಾಹಕರು ಭಾಗವಹಿಸಿದ್ದರು. ವನ್ಯಜೀವಿ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಕೆ.ಪಿ.ಮಾರ್ಟಿನ್, ದ್ವಿತೀಯ ಬಹುಮಾನವನ್ನು ಮೈಸೂರಿನ ಆಂದೋಲನದ ಎಸ್.ಆರ್.ಮಧುಸೂದನ್, ತೃತೀಯ ಬಹುಮಾನವನ್ನು ಸಂತೋಷ್ ಕುಂದೇಶ್ವರ್ ಪಡೆದಿದ್ದಾರೆ.

ಮೃಗಾಲಯ ವಿಭಾಗದಲ್ಲಿ ಪ್ರಥಮ ಜಿ.ಎಸ್.ರವಿಶಂಕರ್, ದ್ವಿತೀಯ ಮೈಸೂರಿನ ವಿಜಯಕರ್ನಾಟಕದ ನಾಗೇಶ್‌ ಪಾಣತ್ತಲೆ, ತೃತೀಯ ಎಂ.ಆರ್.ಭಾಸ್ಕರ್ ಪಡೆದಿದ್ದಾರೆ. ಮೈಸೂರಿನ ಛಾಯಾಗ್ರಾಹಕರಾದ ಎಸ್.ಆರ್.ಮಧುಸೂದನ್ ಹಾಗೂ ನಾಗೇಶ್‌ ಪಾಣತ್ತಲೆ ಅವರುಗಳಿಗೆ ಈಗಾಗಲೇ ಹಲವು ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ.

English summary
Mysore photojournalists sizzle in wildlife photography competition held by Mysore Zoo authorities. Andolan photojournalist SR Madhusudhan and Vijaykarnataka photographer Nagesh Panattile win prizes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X