8 ವರ್ಷದ ಬಾಲಕಿ ಚಚ್ಚಿ ಕೊಂದ ದೇರಾ ಬಾಬ

Minor Girl Murder, Amritsar
ಅಮೃತಸರ್, ಸೆ.25: ದೇರಾ ಸೇವಾದಾರ್(ಧಾರ್ಮಿಕ ಕಾರ್ಯಕರ್ತ)ನೊಬ್ಬ 8 ವರ್ಷದ ಅಮಾಯಕ ಬಾಲಕಿಯನ್ನು ಚಚ್ಚಿ ಕೊಂದ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಬಾಲಕಿಯನ್ನು ಕೊಂದ ನಂತರ ದೇರಾ ಬಾಬಾ ಹಾಗೂ ಆತನ ಪತ್ನಿ ಪರಾರಿಯಾಗಿದ್ದಾರೆ.

ಬಾಬಾನಿಂದ ಸತತವಾಗಿ ಕಿರುಕುಳಕ್ಕೆ ಈಡಾಗುತ್ತಿದ್ದ ಬಾಲಕಿ, ಇತ್ತೀಚೆಗೆ ತಪ್ಪಿಸಿಕೊಂಡು ಬಾಬಾನ ಅಸಲಿ ಚರ್ಯೆಯ ಬಗ್ಗೆ ಗ್ರಾಮಸ್ಥರಿಗೆ ಬಿಡಿಸಿ ಹೇಳಿದ್ದಳು.

ಆದರೆ,ದುರುದುಷ್ಟವಶಾತ್, ಪುಟ್ಟ ಹುಡುಗಿಯ ಮಾತನ್ನು ಯಾರೂ ನಂಬಿರಲಿಲ್ಲ. ಬದಲಿಗೆ ಬಾಲಕಿಯನ್ನು ಮತ್ತೆ ದೇರಾ ಧಾರ್ಮಿಕ ಸೇವಕನ ಮನೆಗೆ ಮುಟ್ಟಿಸಿದ್ದರು.

ಕೆಲವು ತಿಂಗಳುಗಳ ಹಿಂದೆ ನಾಂದೇಡ್ ನಿಂದ ಬಂದಿದ್ದ ಬಾಲಕಿ, ತನ್ನ ಗೋಳನ್ನು ತೋಡಿಕೊಂಡಿದ್ದಳು. ಆದರೆ, ಗ್ರಾಮಸ್ಥರು ಅದಕ್ಕೆ ಕಿವಿಗೊಟ್ಟಿರಲಿಲ್ಲ. ಪುನಃ ತನ್ನ ಊರಿಗೆ ಹೋದರೆ ಬಾಬಾ ಹುಡುಕಿಕೊಂಡು ಬಂದು ಕೊಲ್ಲುತ್ತಾನೆ ನನ್ನನು ರಕ್ಷಿಸಿ ಎಂದು ಬಾಲಕಿ ಗೋಳಾಡಿದ್ದಳು ಎನ್ನಲಾಗಿದೆ.

ಮೊದಲಿಗೆ ಇದು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿಕೊಂಡಿದ್ದ ಪೊಲೀಸರು ನಂತರ ಗ್ರಾಮಸ್ಥರನ್ನು ವಿಚಾರಿಸಿದ ನಂತರ ದೇರಾ ಬಾಬಾನ ನಿಜಬಣ್ಣ ತಿಳಿದುಬಂದಿದೆ. ಆರೋಪಿಗಾಗಿ ಹುಡುಕಾಟ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+