ಜನಲೋಕಪಾಲ್ ಇದ್ದಿದ್ದರೆ ಚಿದಂಬರಂ ಇಷ್ಟೊತ್ತಿಗೆ ಜೈಲಿಗೆ: ಅಣ್ಣಾ
ಮುಂಬೈ,
ಸೆ.24: ಜನಲೋಕ ಪಾಲ್ ಕಾಯಿದೆ ಜಾರಿಯಲ್ಲಿದ್ದಿದ್ದರೆ ಸ್ಪೆಕ್ಟ್ರಂ ಹಗರಣದ ಸಮ್ಮುಖದಲ್ಲಿ ಗೃಹ ಸಚಿವ ಪಿ. ಚಿದಂಬರಂ ಇಷ್ಟೊತ್ತಿಗೆ ಜೈಲಿನಲ್ಲಿರಬೇಕಿತ್ತು ಎಂದು ಭ್ರಷ್ಟಾಚಾರ ವಿರೋಧಿ ಚಳುವಳಿಗಾರ ಆಣ್ಣಾ ಹಜಾರೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. id="toptextpromo">ಚಿದಂಬರಂ
ಅವರನ್ನು ಈಗಾಗಲೇ 'ಅಪ್ರಮಾಣಿಕ' ಎಂದು ಜರಿದಿರುವ ಅಣ್ಣಾ, ತಿಹಾರ್ ಜೈಲಿಗೆ ತಮ್ಮನ್ನು ಹಾಕಿದ್ದರ ಹಿಂದೆ ಇಂತಹ 'ಕಿಡಿಗೇಡಿ' ವ್ಯಕ್ತಿಯ ಕೈವಾಡವೇ ಕೆಲಸ ಮಾಡಿದ್ದು ಎಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಚಿದಂಬರಂ
ಹಣಕಾಸು ಸಚಿವರಾಗಿದ್ದ ವೇಳೆ 2ಜಿ ಸ್ಪೆಕ್ಟ್ರಂ ಲೈಸೆನ್ಸ್‌ಗಳನ್ನು ಹರಾಜು ಹಾಕಲು ಪಟ್ಟು ಹಿಡಿಯದಿದ್ದರೆ ದೇಶದ ಬೊಕ್ಕಸಕ್ಕೆ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿರಲಿಲ್ಲ ಎಂದಿರುವ ರಹಸ್ಯ ಟಿಪ್ಪಣಿಯೊಂದನ್ನು ಪ್ರಣವ್ ಮುಖರ್ಜಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಕಳೆದ ಮಾರ್ಚ್‌ನಲ್ಲಿ ಕಳುಹಿಸಿದ ಸಂಗತಿ ಆರ್ ಟಿಐ ಪ್ರಶ್ನೆಯೊಂದರ ಮೂಲಕ ಬಹಿರಂಗವಾದ ಬಳಿಕ ಹಗರಣ ಚಿದು ಕೊರಳಿಗೆ ಸುತ್ತಿಕೊಂಡಿದೆ.











Click it and Unblock the Notifications