ಅಮ್ಮನ ದೇಗುಲಕ್ಕೆ ನಿಮ್ಮದೊಂದಿಷ್ಟು ಕಾಣಿಕೆ ಇರ್ಲಿ

Sri Mahalakshmi Temple, Kodagu
ವಿರಾಜಪೇಟೆ, ಸೆ.23: ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟೂರು ಕೊಡಗು ಜಿಲ್ಲೆಯಲ್ಲಿ ಬೃಹತ್ ಮಹಾಲಕ್ಷ್ಮಿ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ವೀರಾಜಪೇಟೆ ತಾಲ್ಲೂಕು ಮಾಯಮುಡಿಯ ಗ್ರಾಮಸ್ಥರು ಚಾಲನೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರವೆಂದು ಹೆಸರಾದ ಕೊಡಗು ಅನೇಕ ಐತಿಹಾಸಿಕ ದೇವಾಲಯಗಳ ನೆಲೆವೀಡಾಗಿದ್ದು ಅತ್ಯಂತ ಹೆಚ್ಚು ಪ್ರವಾಸಿಗರನ್ನೂ ಸೆಳೆಯುತ್ತಿದೆ. ಒಂದು ಎಕರೆ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಚ್ಚ ಹಸಿರಿನ ನಡುವೆ ನಿರ್ಮಾಣಗೊಳ್ಳಲಿದೆ.

ಈ ಭವ್ಯ ದೇವಾಲಯ ದ ಅಡಿಪಾಯದ ಕಾರ್ಯವು ದಾನಿಗಳ ನೆರವಿನಿಂದ ನಾಲ್ಕು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈಗ ಪೂರ್ಣಗೊಂಡಿದ್ದು ಕಟ್ಟಡ ಮೇಲೇರಲು ದಾನಿಗಳ ನೆರವು ಅತ್ಯವಶ್ಯವಾಗಿದೆ.

ದಾನಿಗಳು ತಮ್ಮ ನೆರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ದೇವಸ್ಥಾನದ ಖಾತೆ ಸಂಖ್ಯೆ: 31792503466 (ಬ್ರಾಂಚ್ ಕೋಡ್ 0950) ಗೆ ಕಳುಹಿಸಿಕೊಡುವಂತೆ ದೇವಾಲಯದ ಆಡಳಿತ ಮಂಡಳಿ ಕಳಕಳಿಯ ಮನವಿ ಮಾಡಿಕೊಂಡಿದೆ. ದಾನಿಗಳು ವಸ್ತುಗಳ ರೂಪದಲ್ಲಿ ಕೂಡ ನಿರ್ಮಾಣ ಕಾರ್ಯಕ್ಕೆ ಸಹಕರಿಸಬಹುದಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಮಹಾಲಕ್ಷ್ಮಿ ನಮ: ಟ್ರಸ್ಟ್
ಮಾಯಮುಡಿ ಗ್ರಾಮ ಅಂಚೆ
ದಕ್ಷಿಣ ಕೊಡಗು -571213
ಕರ್ನಾಟಕ
ದೂ: 08274 240111, 94494 03332
ಇಮೇಲ್ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+