ರೆಡ್ಡಿಯಿಂದ1000 ಕೋಟಿ ರು ಕಪ್ಪ ವಸೂಲಿ

Janardhaana Reddy
ಹೈದರಾಬಾದ್, ಸೆ.21: ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಗೂಂಡಾರಾಜ್, ಮಾಮೂಲಿ ವಸೂಲಿ ಬಗ್ಗೆ ಸಿಬಿಐ ಬೆಳಕು ಚೆಲ್ಲಿದೆ.

ಇತರೆ ಗಣಿ ಮಾಲೀಕರಿಂದ ಸುಮಾರು 1,000 ಕೋಟಿ ರು.ಗೂ ಅಧಿಕ ಹಣವನ್ನು ಕಪ್ಪವಾಗಿ ಗಣಿಧಣಿ ರೆಡ್ಡಿ ಪಡೆದಿದ್ದಾರೆ ಎಂದು ಸಿಬಿಐ ಹೇಳಿದೆ.

ಸುಮಾರು 300ಕ್ಕೂ ಅಧಿಕ ಗಣಿ ಕಂಪನಿಗಳಿಂದ ರೆಡ್ಡಿಗಳಿಗೆ ಮಾಮೂಲಿ ತಲುಪುತ್ತಿತ್ತು. ಎಲ್ಲವೂ ಓಬಳಾಪುರಂ ಮೈನಿಂಗ್ ಕಂಪೆನಿಗೆ ಸಂದಾಯವಾಗುವಂತೆ ನೋಡಿಕೊಳ್ಳಲಾಗುತ್ತಿತ್ತು. ಕಪ್ಪ ಕಾಣಿಕೆ ಒಪ್ಪಿಸದಿದ್ದವರ ಮೇಲೆ ಗೂಂಡಾಗಿರಿ ಚಲಾಯಿಸಲಾಗುತ್ತಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಕಡಿಮೆ ಬೆಲೆ ಮಾರಾಟ ಆದ್ರೂ ಲಾಭ:
ಮಾರುಕಟ್ಟೆಯಲ್ಲಿ ಪ್ರತಿ ಟನ್ ನ ಬೆಲೆ 5,000 ರು ಇದ್ದರೂ ಗಣಿ ಮಾಲೀಕರು ಶೇ.70 ರಷ್ಟು ಕಬ್ಬಿಣದ ಅದಿರನ್ನು ಕೇವಲ 700 ರು ಗಳಿಗೆ ಮಾರುವಂತೆ ರೆಡ್ಡಿಗಳು ಧಮಕಿ ಹಾಕುತ್ತಿದ್ದರು. 70:30 ಅನುಪಾತದಲ್ಲಿ ವಿನಿಮಯವಾಗುತ್ತಿತ್ತು ಎನ್ನಲಾಗಿದೆ.

2007ರಿಂದ 2010ರ ಅವಧಿಯಲ್ಲಿ ಸುಮಾರು 1,000 ಕೋಟಿ ರು ಗಳಿಸಿದ್ದ ರೆಡ್ಡಿ, ಚೀನಾ ಹಾಗೂ ಇತರೆ ವಿದೇಶದಲ್ಲಿನ ಸಂಸ್ಥೆಗಳಿಗೆ 5,000 ಪ್ರತಿ ಟನ್ ದರದಲ್ಲಿ ಮಾರಾಟ ಮಾಡಿದ್ದಾರೆ.

ರೆಡ್ಡಿಗಳ ಈ ಮಾಮೂಲಿ ವಸೂಲಿ, ಇತರೆ ಮೈನಿಂಗ್ ಕಂಪನಿಗಳ ಮೇಲೆ ಒತ್ತಡ ಹೇರಿಕೆ, ದಬ್ಬಾಳಿಕೆ ಕೂಡಾ ಈಗ ಸಿಬಿಐ ಕೋರ್ಟ್ ನಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲ್ಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+