ಅನುಕಂಪದ ಆಧಾರದಲ್ಲಿ ರೆಡ್ಡಿಗಳ ಕೈಡಿದ KMF

soma-reddy-gains-kmf-sympathy-wave-works
ಬೆಂಗಳೂರು, ಸೆ. 20: ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಸಿಬಿಐ ಕುಣಿಕೆಯಲ್ಲಿ ಸಿಲುಕಿ ಗಣಿರೆಡ್ಡಿಗಳು ಒದ್ದಾಡುತ್ತಿರುವ ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನದ ಹಿನ್ನಡೆಗೆ ಕಾರಣವಾಗುವಂಥ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯ ಗಣಿ ರೆಡ್ಡಿಗಳ ಸೋದರ ಗಾಲಿ ಸೋಮಶೇಖರರೆಡ್ಡಿ KMF ಅಧ್ಯಕ್ಷರಾಗಿ ಮತ್ತೂಂದು ಅವಧಿಗೆ ಮುಂದುವರಿದಿದ್ದಾರೆ.

ಎರಡನೇ ಬಾರಿಯೂ ಅವರನ್ನೇ ಅಧ್ಯಕ್ಷ ಪದವಿಗೆ ಕಣಕ್ಕಿಳಿಸಲು ಸೋಮವಾರ ಸಂಜೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಮತ್ತು ಸರ್ಕಾರದ ಅಸ್ತಿತ್ವಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ರೆಡ್ಡಿ ಸೋದರರು, ಮಂತ್ರಿಗಿರಿಯಿಂದಲೂ ವಂಚಿತರಾಗಿರುವ ಈ ಸಂದರ್ಭದಲ್ಲಿ KMF ಅಧ್ಯಕ್ಷಗಿರಿ ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ಭಾವನೆಯೂ ಸೋಮಶೇಖರರೆಡ್ಡಿಗೆ ವರವಾಗಿದೆ.

KMFನಲ್ಲಿ ಭದ್ರವಾಗಿ ಬೇರೂರಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರ ಆಳ್ವಿಕೆಯನ್ನು ಕೊನೆಗಾಣಿಸಿ ಬಿಜೆಪಿ ಬಾವುಟ ಹಾರಿಸುವಲ್ಲಿ ಗಣಿ ರೆಡ್ಡಿಗಳ ವಿಶೇಷ ಶ್ರಮ ಹಾಗೂ ಹಠ ಮುಖ್ಯ ಕಾರಣ. ಹೀಗಾಗಿ ಮತ್ತೂಂದು ಅವಧಿಗೆ ಅವರನ್ನೇ ಅಧ್ಯಕ್ಷರನ್ನಾಗಿಸುವುದು ಸೂಕ್ತ ಎಂಬ ಅಭಿಮತವೂ ಇಲ್ಲಿ ಕೆಲಸ ಮಾಡಿದೆ. ಆದರೆ ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+