ಮುಸ್ಲಿಮರನ್ನೂ ರಿಸರ್ವೇಶನ್ ಕೋಟಾ ದಡಿಯಲ್ಲಿ ತನ್ನಿ, ಮಾಯಾವತಿ

provide-reservation-to-muslims-mayawati
ಲಕ್ನೋ ಸೆ 18: ರಾಜಕೀಯ ಪಕ್ಷಗಳು ಚುನಾವಣೆ ಹತ್ತಿರ ಬರುತ್ತಿದ್ದಂತೆ ವೋಟ್ ಬ್ಯಾಂಕ್ ಗಾಗಿ ಇಲ್ಲ ಸಲ್ಲದ ಕಸರತ್ತು ಆರಂಭಿಸುತ್ತವೆ. ಈ ದಿಶೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಮುಸ್ಲಿಂ ಜನಾಂಗವನ್ನು ರಿಸರ್ವೇಶನ್ ಕೋಟಾದಡಿಯಲ್ಲಿ ತರಬೇಕೆಂದು ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದ ಮಾಯಾ, ಅಲ್ಪ ಸಂಖ್ಯಾತ ಸಮುದಾಯವರನ್ನು ಈ ಕೋಟಾ ದಡಿಯಲ್ಲಿ ತರಬೇಕು ಅದರಲ್ಲೂ ಮುಸ್ಲಿಮರಿಗೆ ಮೊದಲ ಆದ್ಯತೆ ನೀಡಬೇಕು. ಮುಸ್ಲಿಮರ ಜನಸಂಖ್ಯೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿದೆ. ಈ ಕೋಟಾದಡಿ ಮುಸ್ಲಿಮರನ್ನು ತರಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾದರೆ ಕೇಂದ್ರ ಸರಕಾರ ಅದನ್ನೂ ಪರಿಗಣಿಸಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.

ಇದರಿಂದ ನನ್ನ ಸರಕಾರಕ್ಕೆ ಉತ್ತಮ ಬೆಂಬಲ ವ್ಯಕ್ತ ವಾಗುತ್ತದೆ. ಅಲ್ಪ ಸಂಖ್ಯಾತರು ಇಂದಿಗೂ ಸಮಾಜದಲ್ಲಿ ಮತ್ತು ಆರ್ಥಿಕವಾಗಿ ಕೆಳ ಮಟ್ಟದಲ್ಲಿದ್ದಾರೆ. ಸಾಚಾರ್ ಸಮಿತಿ ವರದಿ ಕೂಡಾ ಇದನ್ನೇ ಹೇಳುತ್ತದೆ. ವರದಿಯಲ್ಲಿ ಅಲ್ಪ ಸಂಖ್ಯಾತರ ಶಿಕ್ಷಣ ವ್ಯವಸ್ಥೆ ಉತ್ತಮ ಪಡಿಸುವ ಬಗ್ಗೆ ವರದಿಯಾಗಿದೆ. ಕೇಂದ್ರ ಸರಕಾರ ತಡ ಮಾಡದೆ ವರದಿಯನ್ನು ಅನುಷ್ಠಾನ ಗೊಳಿಸಲಿ ಎಂದಿದ್ದಾರೆ.

ಮುಸ್ಲಿಮರು ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೇಂದ್ರ ನನ್ನ ಪತ್ರಕ್ಕೆ ಸ್ಪಂದಿಸುತ್ತದೆ ಎಂದು ಭಾವಿಸುತ್ತೇನೆಂದು ಮಾಯಾವತಿ ಹೇಳಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಆಗ್ರಾದಲ್ಲಿ ಇತ್ತೀಚಿಗೆ ಸಾಚಾರ್ ವರದಿ ಜಾರಿಯಾಗ ಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದರು ಎನ್ನುವುದನ್ನು ಇಲ್ಲಿ ನಾವು ಸ್ಮರಿಸಿಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+