ತಾಯಿ ಮೇಲೆ ಕೋಪಕ್ಕೆ ಹಸುಳೆ ಮೇಲೆ ರೇಪ್

ಗಣೇಶ್ ಪುರಿ ಪ್ರದೇಶದ ಪೊದೆಯೊಂದರಲ್ಲಿ ಮಗುವಿ ಶವ ದೊರೆತ್ತಿದ್ದು, ಅನಿಲ್ ಸೀತಾರಾಮ್ ಜಾಧವ್(29) ಎಂಬ ಸ್ಥಳೀಯ ಕಂಟ್ರ್ಯಾಕ್ಟರ್ ನನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ಎರಡು ವರ್ಷಗಳಿಂದ ಜಾಧವ್ ಬಳಿ ಮಗುವಿನ ತಾಯಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಗಂಡನನ್ನು ಬಿಟ್ಟು ತನ್ನನ್ನು ಮದುವೆಯಾಗು ಎಂದು ಆಕೆಯನ್ನು ಜಾಧವ್ ಪೀಡಿಸುತ್ತಿದ್ದ. ಅನೈತಿಕ ಸಂಬಂಧ ಬೆಳೆಸಲು ಅಥವಾ ಮುಂದೆ ಮದುವೆಗೆ ಈ ಸಣ್ಣ ಕೂಸು ಅಡ್ಡಿ ಬರಬಹುದು ಎಂಬ ದುರುದ್ದೇಶದಿಂದ ಮಗುವನ್ನು ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತಾಯಿಯೊಂದಿಗೆ ಮಗು ಇಲ್ಲದ ವೇಳೆ ನೋಡಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಹಿಂಸಿಸಿದ್ದಾನೆ. ತನ್ನ ವಿಕೃತ ಕಾಮನೆ ತೃಪ್ತಿಯಾದ ನಂತರ ಮಗುವನ್ನು ಕೊಂದು ಪೊದೆಯಲ್ಲಿ ಎಸೆದು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications