ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ರು.3.14 ಹೆಚ್ಚಳ, ಮಧ್ಯರಾತ್ರಿಯಿಂದ ಜಾರಿ

By Prasad
|
Google Oneindia Kannada News

Petrol price hiked
ನವದೆಹಲಿ, ಸೆ. 14 : ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರಿಗೆ 3.14 ರು.ನಷ್ಟು ಹೆಚ್ಚಳ ಮಾಡಲಾಗಿದೆ. ಇದು ಬೆಲೆ ಏರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನ ಗಾಯದ ಮೇಲೆ ಹಾಕಿದ ಬರೆಯಂತಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಸ್ಥಿರವಾಗಿದ್ದರೂ, ಡಾಲರ್ ಎದಿರು ರುಪಾಯಿ ಮೌಲ್ಯ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಖಾಸಗಿ ತೈಲ ಕಂಪನಿಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ರುಪಾಯಿ ಮೌಲ್ಯ ಕಳೆದುಕೊಂಡಿದ್ದರಿಂದ ತೈಲ ಕಂಪನಿಗಳು ಲೀಟರಿಗೆ ರು.3.40 ನಷ್ಟ ಅನುಭವಿಸುತ್ತಿವೆ.

ಬೆಂಗಳೂರಿನಲ್ಲಿ 74.50 ರು. : ಬೆಂಗಳೂರಿನಲ್ಲಿ ಬೆಲೆ ಏರಿಕೆಗಿಂತ ಮೊದಲಿನ ಬೆಲೆ ಲೀಟರಿಗೆ 71.36 ರು. ಇದೆ. ಈಗ ಲೀಟರಿಗೆ 74.50 ರು. ಆಗಲಿದೆ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಎಲ್ಲ ರಾಜ್ಯಗಳಿಗಿಂತ ಹೆಚ್ಚಿದೆ. ದೆಹಲಿಯಲ್ಲಿ 66.84 ರು. ಮುಂಬೈನಲ್ಲಿ 71.76 ರು., ಚೆನ್ನೈನಲ್ಲಿ 70.64 ರು. ಮತ್ತು ಕೊಲ್ಕತಾದಲ್ಲಿ ಲೀಟರಿಗೆ 71.15 ರು. ಆಗಿದೆ.

ಪೆಟ್ರೋಲ್ ಬೆಲೆ ಏರಿಕೆಯ ಆಘಾತ ತಟ್ಟುವ ಮುನ್ನವೇ ಕರ್ನಾಟಕದಲ್ಲಿ ಬಸ್ ಪ್ರಯಾಣ ದರವೂ ಏರಲಿದೆ ಎಂಬ ಮಾಹಿತಿ ಬಂದಿದೆ. ಮಧ್ಯರಾತ್ರಿಯ ಮೊದಲೇ ಪೆಟ್ರೋಲ್ ತುಂಬಿಸಲು ಹೋದರೆ 'ನೋ ಸ್ಟಾಕ್' ಎಂಬ ಬೋರ್ಡ್ ವಾಹನ ಚಾಲಕರಿಗೆ ಕಂಡುಬಂದರೂ ಆಶ್ಚರ್ಯವಿಲ್ಲ.

English summary
State owned oil companied have hiked petrol price by Rs. 3.14 per litre. This new rate will come to effect from September 15, Thursday midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X