ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಅಧ್ಯಕ್ಷ ಮಹೋದಯ್ ಗಡ್ಕರಿ ಡೊಳ್ಳು ಹೊಟ್ಟೆಗೆ ಕತ್ತರಿ

By Srinath
|
Google Oneindia Kannada News

nitin-gadkari-undergoes-gastric-bypass-surgery
ಮುಂಬೈ, ಸೆ.15: ತಿನ್ನಬಾರದ್ದನ್ನೆಲ್ಲ ತಿಂದು ಅಸಹ್ಯದ ಮೂಟೆಯಂತೆ ಕಂಗೊಳಿಸುತ್ತಿದ್ದ ಬಿಜೆಪಿ ಅಧ್ಯಕ್ಷ ನಿತಿನ್‌ ಗಡ್ಕರಿ ಅವರ ಡೊಳ್ಳು ಹೊಟ್ಟೆಗೆ ಕತ್ತರಿ ಪ್ರಯೋಗವಾಗಿದೆ. ಲೋಕಾಯುಕ್ತರೋ ಅಥವಾ ಸಿಬಿಐ ನವರೋ ಅವರ ಹೊಟ್ಟೆಗೆ ಕತ್ತರಿ ಹಾಕಿಲ್ಲ. ಬದಲಿಗೆ ವೈದ್ಯಕೀಯವಾಗಿಯೇ ಅವರು ಹೊಟ್ಟೆಯನ್ನು ಕರಗಿಸಿಕೊಂಡಿದ್ದಾರೆ. ಇದರಿಂದ ಗಡ್ಕರಿ ಇನ್ನು ಮುಂದೆ ಸ್ಲಿಮ್ ಅಂಡ್ ಟ್ರಿಮ್ ಆಗಿ ಕಾಣಿಸಲಿದ್ದಾರೆ.

ವಿಷಯ ಏನಪಾ ಅಂದರೆ ಗಡ್ಕರಿ (54) ಅವರು ಇಲ್ಲಿನ ಸೈಫಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಮಧುಮೇಹಕ್ಕಾಗಿ ಗ್ಯಾಸ್ಟ್ರಿಕ್‌ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದು, ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜಕಾರಣಿಗಳೆಂದರೆ ಡೊಳ್ಳು ಹೊಟ್ಟೆ ನೇತಾರರು ಎಂಬುದು ಜನಜನಿತ. ವ್ಯಂಗ್ಯಚಿತ್ರಕಾರರಿಗೋ ಇವರ ಹೊಟ್ಟೆಯ ಮೇಲೆ ಕಣ್ಣು! ನಮ್ಮ ಇಂತಹ ಡೊಳ್ಳು ಹೊಟ್ಟೆ ನೇತಾರರು ಅಸಂಖ್ಯಾತವಾಗಿದ್ದಾರೆ. ಆದರೆ ಅದರ ಮೇಲೆ ಕತ್ತರಿ ಪ್ರಯೋಗಿಸಿಕೊಂಡಿರುವವರು ಗಡ್ಕರಿ ಒಬ್ಬರೇ.

ಗಡ್ಕರಿ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ಡಾ. ಮುಫಾಜಲ್‌ ಲಕಡವಾಲಾ ಹೇಳಿದ್ದಾರೆ. ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ಗಡ್ಕರಿಗೆ ಸಲಹೆ ನೀಡಲಾಗಿದೆ. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತಿ ನಿದ್ರೆ ಮಧ್ಯೆ ಉಸಿರಾಟವೇ ನಿಂತುಹೋಗುವ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

English summary
BJP President Nitin Gadkari underwent a gastric bypass surgery for treatment of Type II diabetes at Saifi Hospital in Mumbai on sept 14. Gadkari (54) is a known diabetic and had poor control of his sugar levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X