ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಪ್ಪಳ ಅಭ್ಯರ್ಥಿ ಗೆದ್ರೆ ಬಿಜೆಪಿ ಸರ್ಕಾರ ಗಾನ್?

By Mahesh
|
Google Oneindia Kannada News

Koppal constituency jinx
ಕೊಪ್ಪಳ, ಸೆ.15: ಚಾಮರಾಜನಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿ ಹಾಗೂ ಅವರ ಸರ್ಕಾರ ಅರು ತಿಂಗಳಲ್ಲಿ ಉರುಳುತ್ತದೆ ಎಂಬ ನಂಬಿಕೆಯಂತೆ ವಿಧಾನಸಭಾ ಕ್ಷೇತ್ರದಲ್ಲೂ ಒಂದು ವಿಚಿತ್ರ ನಂಬಿಕೆ ಚಾಲ್ತಿಯಲ್ಲಿದೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಜೊತೆಗೆ ಹೋರಾಡುವುದಕ್ಕಿಂತ ಬಿಜೆಪಿ ಆಂತರಿಕ ಕಾದಾಟ ಮೇಲಾಟ ಹೆಚ್ಚಾಗುತ್ತಿದೆ.

ಈ ನಡುವೆ ಪದಾಧಿಕಾರಿಗಳ ಸಭೆಯಲ್ಲಿ ಕಣ್ಣೀರಿಟ್ಟ ಹಾಲಿ ಸಿಎಂ ಸದಾನಂದ ಗೌಡ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಕಿಕೊಟ್ಟ ಹಾದಿಯಲ್ಲೇ ನಡೆದಿದ್ದಾರೆ. ಕಾರ್ಯಕರ್ತರಿಗೆ ಯಾರನ್ನು ಬೆಂಬಲಿಸಬೇಕು ಎಂಬುದು ತಿಳಿಯದೇ ವಿಚಿತ್ರ ಸಂಕಟದಲ್ಲಿದ್ದಾರೆ. ಚುನಾವಣಾ ವಿಶೇಷ ಫುಲ್ ಪ್ಯಾಕೇಜ್ ಇಲ್ಲಿದೆ.

ಕೊಪ್ಪಳ ಅಭ್ಯರ್ಥಿಗೆ ಶಾಪ: ಈ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಯ ಪಕ್ಷ ಆಡಳಿತ ಚುಕ್ಕಾಣಿಯನ್ನು ಹೆಚ್ಚು ದಿನಗಳ ಕಾಲ ಹಿಡಿಯಲು ಸಾಧ್ಯವಿಲ್ಲ ಎಂಬ ಬಲವಾದ ನಂಬಿಕೆ ಎಲ್ಲರಲ್ಲೂ ಮನೆಮಾಡಿದೆ.

ಪ್ರಥಮ ಬಾರಿಗೆ ಉಪಚುನಾವಣೆ ಎದುರಿಸುತ್ತಿರುವ ಇಲ್ಲಿನ ಜನರು ಕ್ಷೇತ್ರಕ್ಕೆ ಅಂಟಿದ ಶಾಪದ ಬಗ್ಗೆ ಪುರಾವೆ ಸಮೇತ ವಿವರಿಸುತ್ತಾರೆ. ಈ ಹಿಂದೆ 5-6 ಚುನಾವಣೆಗಳ ಫಲಿತಾಂಶ ನೋಡಿದರೆ ಸರ್ಕಾರದ ಸ್ಥಿತಿ ಗತಿ ಮೇಲೆ ಕೊಪ್ಪಳ ಕ್ಷೇತ್ರದ ಪ್ರಭಾವ ಎಷ್ಟಿದೆ ಎಂಬುದು ತಿಳಿಯುತ್ತದೆ.

* 1989ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ದಿವಟರ ಆಯ್ಕೆಗೊಂಡಿದ್ದರು. ಆದರೆ, ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು.
* 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸಂಗಣ್ಣ ಕರಡಿ ಚುನಾಯಿತರಾದ ಸಂದರ್ಭದಲ್ಲಿ ಜನತಾ ದಳದ ಸರ್ಕಾರ ಇತ್ತು.
* 1999ರಲ್ಲಿ ಜೆಡಿಯುನಿಂದ ಕಣಕ್ಕಿಳಿದ ಸಂಗಣ್ಣ ಕರಡಿ ಜಯಭೇರಿ ಬಾರಿಸಿದಾಗ ಅತ್ತ ಅಧಿಕಾರದಲ್ಲಿ ಕಾಂಗ್ರೆಸ್ ಇತ್ತು.
* 2004ರಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷಿಸಿದ ಸಂಗಣ್ಣ ಕರಡಿ ಸೋಲನುಭವಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ.ಬಸವರಾಜ ಹಿತ್ನಾಳ್ ಶಾಸಕರಾದರು. ವಿಶೇಷ ಎಂದರೆ ಆಗ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ರಚಿಸಿದ್ದ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು.
* 2008ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಜೆಡಿಎಸ್‌ನಿಂದ ಸಂಗಣ್ಣ ಕರಡಿ ಹಾಗೂ ಕೆ.ಬಸವರಾಜ ಹಿತ್ನಾಳ್ ಸ್ಪರ್ಧಿಸಿದರು. ಆದರೆ, ಜೆಡಿಎಸ್‌ನ ಸಂಗಣ್ಣ ಕರಡಿ ಜಯಭೇರಿ ಬಾರಿಸಿದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.

ಒಟ್ಟಾರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು ಶಾಸಕರಾಗುವ ಅಭ್ಯರ್ಥಿಯ ಪಕ್ಷ ಮಾತ್ರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವದಿಲ್ಲ. ಹೀಗಾಗಿ ಈ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುವುದೇ ಇಲ್ಲ ಎಂಬ ಅಭಿಪ್ರಾಯಕ್ಕೆ ಕ್ಷೇತ್ರದ ಮತದಾರರು ಬಂದಿದ್ದಾರೆ.

ಈ ಬಾರಿ ಬಿಜೆಪಿಯ ಆಪರೇಷನ್ ಕಮಲದ 15 ನೇ ದಾಳವಾಗಿ ಉರುಳಿದ ಇದೇ ಕರಡಿ ಸಂಗಣ್ಣ ಬಿಜೆಪಿ ಟೆಕೆಟ್ ನಿಂದ ಸ್ಪರ್ಧಿಸುತ್ತಿದ್ದಾರೆ. ಸಂಗಣ್ಣ ಗೆದ್ದರೆ ಕಥೆ ಬದಲಾಗಲಿದೆ. ಕೊಪ್ಪಳದಲ್ಲಿ ಬಿಜೆಪಿ ನಾಯಕರ ನಾಯಕತ್ವದ ಯಾರು ವಹಿಸಿದ್ದಾರೆ ಮುಂದೆ ಓದಿ. ..

English summary
BJP is likely to break the Koppal Constituency Jinx in the upcoming Koppal By Election 2011. BJP is fighting for pride as CM DV Sadananda Gowda and former cm BS Yeddyurappa desperately want to win the poll to prove some points to highcommand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X