ವೋಟಿಗಾಗಿ ನೋಟು ನೀಡಿದ್ದ ಅಮರ್ ಗೆ ತಾತ್ಕಾಲಿಕ ಜಾಮೀನು
ನವದೆಹಲಿ,
ಸೆ. 15: ರಾಜಕೀಯ ನೇತಾರರ ಬಗ್ಗೆ ಕೋರ್ಟುಗಳು ಒಂದಷ್ಟು ಸಡಿಲವಾಗಿವೆ. ಇದರಿಂದ ಬಂಧನ ಬೇಡ, ಜಾಮೀನು ಕೊಡಿ ಎಂದು ಅಲವತ್ತುಕೊಂಡಿದ್ದ ನಾಯಕರು ನಿರಾಳರಾಗಿದ್ದಾರೆ. id="toptextpromo">ವೋಟಿಗಾಗಿ
ನೋಟು ಪ್ರಕರಣದಲ್ಲಿ ಅಮರ್ ಸಿಂಗ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸೆ. 19ರವರೆಗೆ ಜಾಮೀನು ನೀಡಿದೆ. 2 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಸಲ್ಲಿಸುವಂತೆಯೂ ಕೋರ್ಟ್ ಸೂಚಿಸಿದೆ. ಆದರೆ ಅಮರ ಸಿಂಗ್ ದೆಹಲಿ ಏಮ್ಸ್ ಆಸ್ಪತ್ರೆ ಬಿಟ್ಟು ಕದಲುವಂತಿಲ್ಲ ಎಂದೂ ದೆಹಲಿ ತೀಸ್ ಹಜಾರಿ ಕೋರ್ಟ್ ಸ್ಪಷ್ಟಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ರಾಜ್ಯಸಭೆ
ಸದಸ್ಯ ಅಮರ್ ಸಿಂಗ್ ಆರೋಗ್ಯಸ್ಥಿತಿ ಕುರಿತು ದೆಹಲಿ ಏಮ್ಸ್ ವೈದ್ಯರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯನ್ನು ಗಣನೆಗೆ ತೆಗೆದುಕೊಂಡ ದೆಹಲಿ ನ್ಯಾಯಾಲಯ ಜಾಮೀನು ನೀಡಲು ತನ್ನದೇನೂ ಅಭ್ಯಂತರ ಇಲ್ಲ ಎಂದಿದೆ.











Click it and Unblock the Notifications