ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿವಿಎಸ್ ರಲ್ಲಿ ಗೋಳು ತೋಡಿಕೊಂಡ ಸೋಮಶೇಖರ

By Rohini Bellary
|
Google Oneindia Kannada News

G Somashekara Reddy
ಬಳ್ಳಾರಿ, ಸೆ. 9 : ಸಿಬಿಐ ಅಧಿಕಾರಿಗಳು ಮಾಜಿ ಸಚಿವ, ಎಂಎಲ್ಸಿ, ಸಹೋದರ ಜಿ. ಜನಾರ್ದನ ರೆಡ್ಡಿಯನ್ನು ಬಂಧಿಸಿದಾಗಿನಿಂದ ಈವರೆಗಿನ ಎಲ್ಲಾ ವಿದ್ಯಮಾನಗಳನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಕೆಎಂಎಫ್ ಅಧ್ಯಕ್ಷ, ಶಾಸಕ ಜಿ. ಸೋಮಶೇಖರ ರೆಡ್ಡಿ ಜಿಂದಾಲ್‌ನಲ್ಲಿ ಶುಕ್ರವಾರ ಭೇಟಿ ಮಾಡಿ ಸವಿವರವಾಗಿ ವಿವರಿಸಿ, ನೋವನ್ನು ತೋಡಿಕೊಂಡಿದ್ದಾರೆ.

ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಜಿಂದಾಲ್‌ಗೆ ಆಗಮಿಸಿದ್ದ ಡಿ.ವಿ. ಸದಾನಂದಗೌಡರನ್ನು ಆದರಪೂರ್ವಕವಾಗಿ ಬರಮಾಡಿಕೊಂಡ ಸೋಮಶೇಖರ ರೆಡ್ಡಿ, ಬಳ್ಳಾರಿ ಬಂದ್ ಜಿಲ್ಲಾಧಿಕಾರಿ ಕೈಗೊಂಡ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಗಲಭೆಯಲ್ಲಿ ಕಾರ್ಪೊರೇಟರ್, ತಮ್ಮ ಕಟ್ಟಾ ಬೆಂಬಲಿಗ ಬಿಜೆಪಿಯ ಯುವ ಮುಖಂಡ ದಿವಾಕರ, ಸುನಿಲ್ ರೆಡ್ಡಿ ಇನ್ನಿತರರ ವಿರುದ್ಧ ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಅನಗತ್ಯವಾಗಿ ದೂರು ದಾಖಲಿಸಿ ತಮ್ಮ ಬೆಂಬಲಿಗರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಅಧಿಕಾರಿ ವಿರೋಧ ಪಕ್ಷಗಳ ಏಜೆಂಟರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿ ಬಂದ್‌ನಲ್ಲಿ ಸೋಮಶೇಖರ ರೆಡ್ಡಿ ಅವರ ಕುಮ್ಮಕ್ಕಿನಿಂದಲೇ ಪ್ರತಿಭಟನಾಕಾರರು ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅವರ ಹೆಸರನ್ನೂ ಕೂಡ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಪೊಲೀಸರಿಗೆ ಆದೇಶಿಸಿದ್ದರು. ಆದರೆ, ಸೋಮಶೇಖರ ರೆಡ್ಡಿ ಅಂದು ಹೈದರಾಬಾದಲ್ಲಿದ್ದ ಕಾರಣ ದೂರು ದಾಖಲಿಸಿಕೊಳ್ಳುವುದಿಲ್ಲ ಪೊಲೀಸರು ಜಿಲ್ಲಾಧಿಕಾರಿಗೆ ಹೇಳಿದ್ದರು. ಈ ಕುರಿತು ಮುಖ್ಯಮಂತ್ರಿಗೆ ಅವರು ದೂರು ನೀಡಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

ವಾಸ್ತವದಲ್ಲಿ ಬಳ್ಳಾರಿ ಬಂದ್‌ನಲ್ಲಿ ಸರ್ಕಾರಿ ಕಚೇರಿಗಳಲ್ಲಿ ದಾಂಧಲೆ ನಡೆಸಿ, ಪೀಠೋಪಕರಣಗಳು ಮತ್ತು ಕಂಪ್ಯೂಟರ್‌ಗಳನ್ನು ಸೋಮಶೇಖರ ರೆಡ್ಡಿಯ ಬೆಂಬಲಿಗರು ಧ್ವಂಸ ಮಾಡುತ್ತಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ದಾಖಲಾಗಿದೆ. ಮೇಲಾಗಿ ಜಿಲ್ಲಾಧಿಕಾರಿಗಳೇ ನೇರವಾಗಿ ಕಾರ್ಪೊರೇಟರ್ ದಿವಾಕರ, ಸುನಿಲ್‌ರೆಡ್ಡಿಯ ಹೆಸರನ್ನು ಮಾಧ್ಯಮಗಳಿಗೆ ತಿಳಿಸಿರುವುದು ವಿಶೇಷ.

English summary
KMF chief G Somashekara Reddy has complained to chief minister DV Sadananda Gowda that Bellary DC AA Biswas intentionally implicated his followers in Bellary bandh riots. DVS in Jindal and will proceed to Koppal to campaign in Koppal for by poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X