ಗಾಲಿ ರೆಡ್ಡಿಗಾರು ಈಗ ಕೈದಿ ನಂ. 697

cbi-arrested-reddy-now-prisoner-no-697
ಹೈದರಾಬಾದ್, ಸೆ.6: ಸೋಮವಾರ ಬೆಳ್ಳಬೆಳಗ್ಗೆ ಸಿಬಿಐನಿಂದ ಬಂಧನಕ್ಕೊಳಗಾದ ಗಣಿವೀರ ಜನಾರ್ದನ ರೆಡ್ಡಿಗೆ ರಾತ್ರಿ ವೇಳೆಗೆ ಹೊಸ ಕೋಡು ಮೂಡಿದೆ. ಆದರೆ ಇದು ಬಯಸದೇ ಬಂದ (ದೌ)ರ್ಭಾಗ್ಯ.

ಏನಪಾ ಅಂದರೆ ಚಂಚಲಗೂಡ ಜೈಲು ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿಕೊಳ್ಳುವಾಗ ಅವರಿಗೆ ಕೈದಿ ನಂ. 697 ಎಂಬ ಸಂಖ್ಯೆಯನ್ನು ತೊಡಿಸಿದ್ದಾರೆ. ಹಾಗೆಯೇ ಅವರ ಜತೆಗೇ ಬಂಧನಕ್ಕೊಳಗಾಗಿರುವ ಶ್ರೀನಿವಾಸ್ ರೆಡ್ಡಿಗೂ (ಇವರು ಜನಾ ರೆಡ್ಡಿ ನೆಂಟರಲ್ಲ) ಸಂಖ್ಯೆ ದಯಪಾಲಿಸಲಾಗಿದ್ದು ಅವರೀಗ ಕೈದಿ ನಂ. 698.

ಸೋಮವಾರವಿಡೀ ಹೊಟ್ಟೆಗೆ ಸರಿಯಾಗಿ ಏನೂ ತೆಗೆದುಕೊಳ್ಳದೇ ಇರುವುದರಿಂದ ಮಂಗಳವಾರ ಬೆಳಗ್ಗೆ ಹಸಿವು ಹೆಚ್ಚಾಗಿ ಜನಾ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಜೈಲಿನ ಉಪಹಾರ ಸೇವಿಸಿದ್ದಾರೆ. ಇಂಗ್ಲಿಷ್ ದಿನಪತ್ರಿಕೆಗಳು ಬೇಕು ಎಂದಾಗ ಜೈಲಾಧಿಕಾರಿಗಳು ನಯವಾಗಿ ತಿರಿಸ್ಕರಿಸಿದ್ದಾರೆ. ಬೇಕಾದರೆ ತೆಲುಗು ಪತ್ರಿಕೆಗಳನ್ನು ಓದಿ ಎಂದು ಸೂಚಿಸಿದ್ದಾರೆ. ಮನೆ ಊಟಕ್ಕಾಗಿ ಮನವಿ ಸಲ್ಲಿಸಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಇನ್ನು, ಅಕ್ಷರಶಃ ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದ ರೆಡ್ಡಿಗಾರುಗೆ ಪಾಪ ಮೊದಲ ರಾತ್ರಿ ಅನುಭವ ಹೇಗಿತ್ತು ತಿಳಿದುಕೊಳ್ಳಬಯಸುವವರಿಗಾಗಿ... ಮಾವನ ಮನೆಯ ಊಟ ಬೇಡವೆಂದ ಮುಖ ತಿರುಗಿಸಿದ ರೆಡ್ಡಿ ಜೋಡಿ (ತವರು)ಮನೆಯವರು ತಂದುಕೊಟ್ಟ ಬಿಸ್ಕತ್ತನ್ನು ತಿಂದಿದ್ದಾರೆ. ಅನ್ನ, ಬೇಳೆ ಸಾರು ಮತ್ತು ಚಪಾತಿ ಊಟವನ್ನು ಬಿಲ್ಕುಲ್ ಬೇಡ ಎಂದಿದ್ದಾರೆ.

ಮೊದಲ ರಾತ್ರಿಗೇ ರೆಡ್ಡಿ ಜೋಡಿ ಜೈಲು ವಾತಾವರಣದಿಂದ ಕಂಗೆಟ್ಟವರಂತೆ ಕಂಡಿದ್ದಾರೆ. ಸಾದಾ ಕೋಣೆಯಲ್ಲಿ ಪವಡಿಸಿದ್ದಾರೆ. ಅವರಿಗೆ ವಿಶೇಷ ಸವಲತ್ತು ಕೊಟ್ಟಿಲ್ಲ ಎಂದು ಎಂದು ಜೈಲು ಮೂಲುಗಳು ತಿಳಿಸಿವೆ.

ಕುತೂಹಲಕಾರಿ ಸಂಗತಿಯೆಂದರೆ ರೆಡ್ಡಿ ಜೋಡಿಗೆ ಸಾಥ್ ನೀಡಲು ಭಾರಿ ಕುಳವೊಂದು ವರ್ಷಾನುಗಟ್ಟಲೆಯಿಂದ ಜೈಲಿನಲ್ಲಿ ಕೊಳೆಯುತ್ತಿದೆ. ಯಸ್, ಸಾವಿರಾರು ಕೋಟಿ ರೂ. ವಂಚನೆ ಆರೋಪಿ ಸತ್ಯಂ ಕಂಪ್ಯೂಟರ್ಸಿನ ರಾಮಲಿಂಗರಾಜು ಇದೇ ಜೈಲಿನಲ್ಲಿದ್ದಾನೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+