ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಸಿ ಕಂಪನಿಗೆ ರೈಲು ಪ್ರಯಾಣಿಕರ ಧನ್ಯವಾದ

By Shami
|
Google Oneindia Kannada News

ACC Cements Donates Electric Vehicle
ಬೆಂಗಳೂರು, ಸೆ. 6 ; ನಮ್ಮ ದೇಶದ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದರೆ ಕೈ ಕಾಲು ತೋಳು ಇಚ್ಛಾಶಕ್ತಿ ಗಟ್ಟಿ ಇರಬೇಕು. ನೂಕುನುಗ್ಗಲುಗಳನ್ನು ಗೆದ್ದು, ಟಿಕೆಟ್ ಇದೆಯೋ ಇಲ್ಲವೋ ರೈಲು ಹತ್ತಿ ಓಡಿದವನೇ ಜಾಣ.

ಯೌವನದಲ್ಲಿ ಇದೆಲ್ಲ ಸಾಧ್ಯ. ಆದರೆ ವಯಸ್ಸಾದವರು, ಅಂಗವಿಕಲರು, ರೋಗಿಗಳು ಮನೆಯಿಂದ ಬಸ್ಸು ಹತ್ತಿ, ರೈಲು ನಿಲ್ದಾಣ ತಲುಪಿ, ಗಂಟು ಮೂಟೆ ಹೊತ್ತುಕೊಂಡು ಪ್ಲಾಟ್ ಫಾರಂ ಬದಲಾಯಿಸಿ ಸರಿಯಾದ ರೈಲು ಹತ್ತುವ ಹೊತ್ತಿಗೆ ಪ್ರಾಣ ಹೋಗಿರತ್ತೆ. ಎಷ್ಟು ಕಷ್ಟ ಎಷ್ಟು ಕಳವಳ. ಕೇಳುವವರಾರು, ಹೇಳುವವರಾರು.

ರೈಲು ನಿಲ್ದಾಣಗಳನ್ನು ಆಧುನಿಕಗೊಳಿಸುವ, ದರ್ಜೆಯನ್ನು ಮೇಲಕ್ಕೆ ಏರಿಸುವ ಪ್ರಸಾವನೆಗಳನ್ನು ನೀವು ಆಗಾಗ ನ್ಯೂಸ್ ಪೇಪರುಗಳಲ್ಲಿ ಓದಿರುತ್ತೀರಿ. ಆ ಯೋಜನೆಗಳೆಲ್ಲ ಜಾರಿಯಾಗುವ ಸಮಯಕ್ಕೆ ಒಂದು ತಲೆಮಾರಿನ ಬದುಕಿನ ಬಂಡಿಯ ಆಯುಷ್ಯವೇ ತೀರಿರುತ್ತದೆ.

ಬೆಂಗಳೂರು ರೈಲು ನಿಲ್ದಾಣದಲ್ಲಿ ಎಲವೇಟರ್ ಸ್ಥಾಪಿಸುವುದಾಗಿ ಇಲಾಖೆ ಹೇಳಿತ್ತು. ಬಹುಶಃ ಆ ಹೇಳಿಕೆಯನ್ನು ಇಲಾಖೆ ತಾನೇ ಮರೆತಿರಬಹುದು. ಕಾಲಮಿತಿ ಇಲ್ಲದೆ ಯೋಜನೆಗಳನ್ನು ಪ್ರಕಟಿಸುವ ರೈಲಾಗಲೀ ಬಸ್ಸಾಗಲೀ ಅಥವಾ ಯಾವುದೇ ಇಲಾಖೆಗಾಗಲೀ ನಮ್ಮದೊಂದು ಧಿಕ್ಕಾರ.

ಒಂದೇ ಒಂದು ಸಂತೋಷವೆಂದರೆ ಕೆಲವು ಖಾಸಗಿ ಕಂಪನಿಗಳು ತಮ್ಮ ಸಾಮಾಜಿಕ ಕಾಳಜಿ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಸೌಕರ್ಯಗಳನ್ನು ಕಲ್ಪಿಸುವುದುಂಟು. ಅಂಥ ಕೆಲಸವನ್ನು ಇದೀಗ ಮಾಡಿರುವ ಎಸಿಸಿ ಸಿಮೆಂಟ್ ಕಂಪನಿಗೆ ನಿಮ್ಮ ಪರವಾಗಿ ನಮ್ಮ ಅಭಿನಂದನೆಗಳು.

ಹಿರಿಯ ನಾಗರಿಕರು, ಅಂಗವಿಕಲರು, ಗರ್ಭಿಣಿಯರು ಪಡುತ್ತಿದ್ದ ತೊಂದರೆಯನ್ನು ಗಮನಿಸಿ ಎಸಿಸಿ ಕಂಪನಿ ಯಶವಂತಪುರ ರೈಲು ನಿಲ್ದಾಣಕ್ಕೆ ಬ್ಯಾಟರಿ ಚಾಲಿತ ವಿದ್ಯುತ್ ವಾಹನವನ್ನು ಇತ್ತೀಚೆಗೆ ದೇಣಿಗೆಯಾಗಿ ನೀಡಿದೆ. ತುಂಬಾ ಜನಕ್ಕೆ ತುಂಬಾ ಅನುಕೂಲವಾಗಿದೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ. ಎಸಿಸಿ ಕಂಪನಿಯ ಸಿಮೆಂಟಿನಷ್ಟೇ ಸೇಫ್ ಆಗಿರಲಿ.

English summary
ACC has donated Battery Charged electric vehicle to Yashavanthpur railway station, Bangalore. It really helps a lot. Oneinda-Kannada congratulates ACC for its concern and social welfare initiatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X