ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿ ಚಾಮುಂಡಿ ಪಾದಕ್ಕೆ ಎರಗಿದ ಶ್ರೀರಾಮುಲು

By Bm Lavakumar
|
Google Oneindia Kannada News

B Sriramulu
ಮೈಸೂರು, ಸೆ. 5 : ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿ ಮಂತ್ರಿಗಿರಿಯನ್ನು ಕಳೆದುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ ಶ್ರೀರಾಮುಲು ಅವರು ಬೆಂಬಲಿಗರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟ ಹತ್ತಿ 'ಕಾಪಾಡಮ್ಮ ತಾಯೇ' ಎಂದು ಚಾಮುಂಡಿ ತಾಯಿಯ ಚರಣಕ್ಕೆ ಎರಗಿದ್ದಾರೆ.

ಕಾಲುನಡಿಗೆಯಲ್ಲಿಯೇ ಚಾಮುಂಡಿ ಬೆಟ್ಟ ಹತ್ತಿದ ಶ್ರೀರಾಮುಲು ಅವರ ಬೆಂಗಳೂರಿನ ಮನೆಯ ಮೇಲೆಯೂ ದಾಳಿಯಾಗುತ್ತಿದ್ದು, ಅವರು ಕೂಡ ಸಿಬಿಐನಿಂದ ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರ ಬಂಧನವನ್ನು ಶ್ರೀರಾಮುಲು ತೀವ್ರವಾಗಿ ವಿರೋಧಿಸಿದ್ದಾರೆ.

ಮಡಿಕೇರಿಯಲ್ಲಿ ರಾಜೀನಾಮೆ ಸಲ್ಲಿಕೆ : ಬೆಂಗಳೂರಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಮಾಜಿ ಸಚಿವ ಬಿ.ಶ್ರೀರಾಮಲು ಅವರು ಬಳಿಕ ಮಡಿಕೇರಿಗೆ ತೆರಳಿ ಸ್ಪೀಕರ್ ಬೋಪಯ್ಯ ಅವರ ನಿವಾಸದಲ್ಲಿ ಭಾನುವಾರ ರಾತ್ರಿ 9.30ಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಸ್ಪೀಕರ್ ಬೋಪಯ್ಯ ಅವರು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ರಾತ್ರಿ ಆಗಮಿಸಿದ ಶ್ರೀರಾಮಲು ಅವರನ್ನು ಬೆಂಬಲಿಗರು ಇಲವಾಲದಲ್ಲಿ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಶ್ರೀರಾಮಲು ನನ್ನ ಮೇಲೆ ಬಂದಿರುವ ಕಳಂಕವನ್ನು ತೊಡೆದು ಹಾಕಲು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದರಲ್ಲದೆ, ಸರ್ಕಾರವನ್ನು ಉರುಳಿಸಲು ಅಲ್ಲ ಎಂದರು.

English summary
Former health minister B Sriramulu climbs Chamundi hills in Mysore on Monday, September 5 along with his followers to seek blessings of mother Chamundi. Sriramulu submits his resignation to assembly speaker KG Bopaiah in Madikeri on September 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X