ತನೀಷಾ ಕುಪ್ಪಂಡ ಎತ್ಕೊಂಡು ಡಾನ್ಸ್ ಮಾಡಿದ ಕಿಶನ್‌ಗೆ ಸಿಕ್ತು ಬಹುಪರಾಕ್, ಇದು ಬಾಡಿ ಶೇಮಿಂಗಾ!
ವಿಧಾನಸೌಧದ ಎದುರು ತನೀಷಾ ಕುಪ್ಪಂಡ ಜೊತೆಗೆ ಕಿಶನ್ ಬಿಂದಾಸ್ ಆಗಿ ಡಾನ್ಸ್ ಮಾಡಿದ್ದಾರೆ. ತನಿಷಾ ಎತ್ಕೊಂಡು ಮುದ್ದಾಡ್ತಿರೋ ವೀಡಿಯೋ ನೋಡಿ ಬಹುಜನರು ಬಹುಪರಾಕ್ ಅನ್ತಿದ್ದಾರೆ, ಇಲ್ಲಿ ಬಾಡಿ ಶೇಮಿಂಗ್ ಆಗಿರೋದೆಲ್ಲಿ! ಕಿಶನ್ ಬಿಳಗಲಿ ಅನ್ನೋ ವ್ಯಕ್ತಿ ಹಲವರಿಗೆ ಬಿಗ್‌ಬಾಸ್ ಮೂಲಕ ಪರಿಚಯ. ಆದರೆ ಇತ್ತೀಚಿನವ್ರೆಲ್ಲ ಅವರ ರೀಲ್ಸ್ ಅನ್ನು ಕಣ್ಣು ಬಾಯಿ ಬಿಟ್ಕೊಂಡು ನೋಡ್ತಿದ್ದಾರೆ. ಕಾರಣ ಕಿಶನ್ ನಟಿಯರೊಂದಿಗೆ ಮಾಡೋ ಡ್ಯಾನ್ಸ್ ಎಂಥವರೂ ಒಂದು ಕ್ಷಣ ನೋಡ್ಕೊಂಡು ನಿಲ್ಲೋ ಹಾಗಿರುತ್ತವೆ.
ಇದೀಗ ವಿಧಾನಸೌಧದ ಎದುರು ದರ್ಶನ್‌ನ ನವ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಶನ್, 'ಬಾರೆ ಬಾರೆ ಬಾರೆ ನನ್ನ ಬಜಾರಿ' ಹಾಡಿಗೆ ಮನಸೋ ಇಚ್ಛೆ ಕುಣಿದಿದ್ದಾರೆ. ಇಷ್ಟೇ ಆಗಿದ್ರೆ ಸುದ್ದಿ ಆಗುತ್ತಿರಲಿಲ್ಲ. ಇಲ್ಲಿ ಅವರ ಡ್ಯಾನ್ಸ್‌ಗೆ ಪಾರ್ಟನರ್ ಆಗಿ ಬಂದಿದ್ದು ಬೆಂಕಿ ಬೆಡಗಿ ತನಿಷಾ ಕುಪ್ಪಂಡ. ಅಷ್ಟೇ ಆಗಿದ್ದರೂ ಪರವಾಗಿರುತ್ತಿರಲಿಲ್ಲ, ಕಿಶನ್ ಡ್ಯಾನ್ಸ್‌ನ ಒಂದು ಹಂತದಲ್ಲಿ ತನೀಷಾ ಅವರನ್ನು ಎತ್ತಿಕೊಂಡು ಡ್ಯಾನ್ಸ್ ಮಾಡುತ್ತಾರೆ. ಈ ಸೀನ್ ಬೇರೆ ಬಗೆಯಲ್ಲಿ ಓಡಾಡುತ್ತಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಎಬ್ಬಿಸಿರುವ ಬಿರುಗಾಳಿ ಅಂತಿಥಾದ್ದಲ್ಲ. ಮಾಸ್ ಗೆ ಕ್ಲಾಸ್‌ಗೆ ಈ ಬಾಸ್ ಎನ್ನುವ ಶೀರ್ಷಿಕೆಯಲ್ಲಿ ಕಿಶನ್ ಪೋಸ್ಟ್ ಮಾಡಿರುವ ಈ ಡಾನ್ಸ್ ವಿಡಿಯೋ, ಪೋಸ್ಟ್ ಮಾಡಿದ ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀಕ್ಷಣೆ ಕಂಡಿದೆ.

ಆದರೆ ತನಿಷಾ ಈ ವೀಕ್ಷಣೆಯನ್ನಷ್ಟೇ ನೋಡಿ ಖುಷಿ ಪಟ್ಟರೆ ಪರವಾಗಿಲ್ಲ, ಕೆಳಗಿನ ಕಾಮೆಂಟ್ ಸೆಕ್ಷನ್ ಏನಾದರೂ ನೋಡಲಿಕ್ಕೆ ಹೋದರೆ ಯಾವ ಲೆವೆಲ್‌ಗೆ ಜೀರ್ಣಿಸಿಕೊಳ್ತಾರೋ ಗೊತ್ತಿಲ್ಲ ಅಂತಿದ್ದಾರೆ ಅವರ ಆಪ್ತರು. ಇದಕ್ಕೆ ಕಾರಣವೂ ಇದೆ. ತನೀಷಾ ಸ್ವಾಭಿಮಾನಿ ನಟಿ. ತನ್ನ ಇಮೇಜ್‌ಗೆ ಧಕ್ಕೆ ಬಂದಂಥಾ ಪ್ರಸಂಗಗಳಲ್ಲಿ ಅವರು ಸಿಡೆದೆದ್ದು ಪ್ರತಿಕ್ರಿಯೆ ನೀಡುತ್ತಾರೆ.
ಫೋಟೋಗ್ರಾಫರ್ ಜನ್ಮ ಜಾಲಾಡಿದ್ದ ತನಿಷಾ
ಈ ಹಿಂದಿನ ಪ್ರಸಂಗವನ್ನೇ ನೆನಪಿಸಿಕೊಳ್ಳಿ.ವಾರಗಳ ಕೆಳಗೆ ಫೋಟೋಗ್ರಾಫರ್ ಒಬ್ಬಾತ ತನೀಷಾ ಕುಪ್ಪಂಡ ಬಳಿ ನಿನ್ನ ರೇಟ್ ಎಷ್ಟು, ಡೇಟಿಂಗ್‌ಗೆ ಬರ್ತೀಯಾ ಎಂದು ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ತನೀಷಾ ಆ ಫೋಟೋಗ್ರಾಫರ್ ಜನ್ಮ ಜಾಲಾಡಿದ್ದಾರೆ. ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಡೇಟಿಂಗ್ ಬರ್ತೀಯಾ? ನಿನ್ನ ರೇಟ್ ಎಷ್ಟು? ಎಂದು ಮೆಸೇಜ್ ಮಾಡಿದ್ದವನ ಹಿನ್ನೆಲೆ ಚೆಕ್ ಮಾಡಿದ ತನಿಷಾ ಆತನ ಸೋಷಿಯಲ್ ಮೀಡಿಯಾ ಐಡಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ಅನಿಲ್ ಕುಮಾರ್ ಎಂಬಾತ ಕಳುಹಿಸಿದ್ದ ಅಸಭ್ಯ ಮೆಸೇಜ್ ಹಾಗೂ ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ತನಿಷಾ ಸ್ಕ್ರೀನ್‌ಶಾಟ್ ತೆಗೆದು ತಮ್ಮ ಸ್ಟೇಟಸ್‌ನಲ್ಲಿ ಹಾಕಿದ್ದರು. ನೋಡಿ ಇವನ ಯೋಗ್ಯತೆಯನ್ನು ಎಂದು ಬರೆದುಕೊಂಡಿದ್ದರು. ಫೋಟೋಗ್ರಾಫರ್‌ನ ನೀಚತನದ ವಿರುದ್ಧ ಇದೀಗ ಸೋಷಿಯಲ್ ಮೀಡಿಯಾ ಮಂದಿ ಸಿಕ್ಕಾಪಟ್ಟೆ ಆಕ್ರೋಶ ಹೊರಹಾಕಿದ್ದರು. ಕೇವಲ ಸ್ಕ್ರೀನ್‌ಶಾಟ್ ಹಾಕಿದರೆ ಸಾಲದು, ಇಂತಹ ನೀಚರನ್ನು ಜೈಲಿಗಟ್ಟಬೇಕು ಎಂದೆಲ್ಲ ಕಾಮೆಂಟ್ ಮಾಡಿದ್ದರು.
ಇದೀಗ ಕಿಶನ್ ಅವರ ಸೋಷಿಯಲ್ ಮೀಡಿಯಾ ಪೇಜ್, ಯೂಟ್ಯೂಬ್‌ನಲ್ಲೆಲ್ಲ ಕಿಶನ್ ಹಾಗೂ ತನಿಷಾ ಡ್ಯಾನ್ಸ್ ಮಾಡಿದ ವೀಡಿಯೋ ಬಹಳಷ್ಟು ಜನರ ಗಮನ ಸೆಳೆಯುತ್ತಿದೆ. ಇದನ್ನು ಶೂಟ್ ಮಾಡುವಾಗಲೇ ಕಿಶನ್‌ಗೆ ಗೊತ್ತಿತ್ತು, ಈ ಡ್ಯಾನ್ಸ್‌ಗೆ ಸಿಕ್ಕಾಪಟ್ಟೆ ಬಾಡಿಶೇಮಿಂಗ್ ಕಾಮೆಂಟ್ಸ್ ಬರುತ್ತೆ ಅಂತ. ಅದಕ್ಕಾಗಿ ಕಾಮೆಂಟ್ ಸೆಕ್ಷನ್‌ಗೆ ಬಂದು ಡಿಸ್ಕ್ಲೈಮರ್ ಬೇರೆ ಹಾಕಿದ್ದಾರೆ. 'ನಾನು ಇಲ್ಲಿ ಬರುವ ಕಾಮೆಂಟ್‌ಗಳನ್ನೆಲ್ಲ ನೋಡುತ್ತಿದ್ದೇನೆ. ಈ ಹಾಡನ್ನು ಮಾಡಲು ನಾವು ಬಹಳ ಶ್ರಮ ಹಾಕಿದ್ದೇವೆ ಎನ್ನುವುದು ಕಾಮೆಂಟ್ ಮಾಡುವ ಮೊದಲು ನಿಮ್ಮ ಗಮನದಲ್ಲಿರಲಿ. ನೀವು ಡಾನ್ಸ್ ಬಗ್ಗೆ ಏನು ಬೇಕಾದರೂ ಹೇಳಿ ಪರ್ವಾಗಿಲ್ಲ. ಆದರೆ ಬಾಡಿ ಶೇಮಿಂಗ್ ಮಾತ್ರ ಬೇಡ. ನಾವು ಗಂಡಸರಿಗೆ ದೈಹಿಕ ಸಮಸ್ಯೆಗಳು ಅಷ್ಟಾಗಿ ಬರುವುದಿಲ್ಲ. ಆದರೆ ಹೆಣ್ಣುಮಕ್ಕಳ ವಿಚಾರದಲ್ಲಿ ಹಾಗಲ್ಲ. ಅವರ ದೇಹ ಎಷ್ಟೋ ಕಾರಣಗಳಿಗೆ ಅವರ ನಿಯಂತ್ರಣಕ್ಕೆ ಸಿಗುವುದಿಲ್ಲ. ನೀವಿದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂಬ ನಂಬಿಕೆ ಇದೆ. ನನಗೆ ತನಿಷಾ ಮಾಡಿದ ಡ್ಯಾನ್ಸ್ ಬಗ್ಗೆ ಹೆಮ್ಮೆ ಇದೆ' ಎಂದಿದ್ದಾರೆ.
ಆದರೆ ಇದ್ಯಾವುದನ್ನೂ ಗಣನೆಗೇ ತೆಗೆದುಕೊಳ್ಳದೇ ಜನ ವೀಡಿಯೋ ನೋಡಿ ಕಾಮೆಂಟ್ ಮೇಲೆ ಕಾಮೆಂಟ್ ಮಾಡುತ್ತಲೇ ಇದ್ದಾರೆ. ಐಶ್ವರ್ಯಾ ಸಿಂಧೋಗಿ ಬೆಂಕಿ ಎಂದು ಪ್ರದರ್ಶನವನ್ನು ಹೊಗಳಿದರೆ, 'ಇವ್ನು ರಸಿಕ ಇದಾನ, ಯಾರನ್ನೂ ಬಿಡಲ್ಲ' ಅಂತ ಮತ್ತೊಬ್ಬರು ಹೇಳಿದ್ದಾರೆ. ಮತ್ತೊಬ್ಬರು 'ಏಳು ಮಲ್ಲಿಗೆ ತೂಕದವಳ ಎತ್ತಿದ ನಿಂಗೆ ನಮಸ್ಕಾರ' ಅಂತ ಕೊಂಚ ಬಾಡಿ ಶೇಮಿಂಗ್ ರೀತಿಯೇ ಮಾತನಾಡಿದ್ದಾರೆ. ಎಷ್ಟೋ ಜನ ಕಿಶನ್ ಗೆ ಸೊಂಟ ಮುರ್ಕೋಬೇಡ ಎಂದು ಎಚ್ಚರಿಕೆ ಹೇಳಿದ್ದಾರೆ.
ಬರಹ: ಭವಾನಿ ಭಟ್













Click it and Unblock the Notifications