ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾರ್ದನ ರೆಡ್ಡಿ ಬಂಧನ; ಜಗನ್ ಗೆ ಭಾರಿ ಹೊಡೆತ

By Srinath
|
Google Oneindia Kannada News

janardhan-reddy-arrest-jagan-feels-heat
ಬೆಂಗಳೂರು, ಸೆ.5: ಅಕ್ರಮ ಗಣಿಗಾರಿಕೆ ವೀರ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿರುವುದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸ್ಥಾಪಕ ಅಧ್ಯಕ್ಷ ವೈ ಎಸ್ ಜಗನ್ಮೋಹನ ರೆಡ್ಡಿಗೆ ಭಾರಿ ಹೊಡೆತ ನೀಡಿದೆ.

ಜಗನ್ ಅವರ ಅಪ್ಪ ರಾಜಶೇಖರ ರೆಡ್ಡಿ ಅವರಿಗೆ ತಾವು ತುಂಬಾ ಹತ್ತಿರ ಹತ್ತಿರ. ಹಾಗೆಯೇ, ಜಗನ್ ಗೆ ಸಹ. ರಾಜಶೇಖರ ರೆಡ್ಡಿ ಕುಟುಂಬದ ಜತೆ ವ್ಯಾಪಾರ ಸಂಬಂಧ ಹೊಂದಿದ್ದೇವೆ ಎಂದು ಜನಾ ರೆಡ್ಡಿ ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದರು. ಇದು ಜಗನ್ ಪಾಲಿಗೆ ಶಾಪವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಜಗನ್ ಅವರನ್ನು ಸಿಬಿಐ ಇನ್ನೂ ಬಂಧಿಸಿಲ್ಲವಾದರೂ ಅಕ್ರಮ ಸಂಪತ್ತು ಕ್ರೋಡೀಕರಣದ ಹಿನ್ನೆಲೆಯಲ್ಲಿ ಅವರನ್ನು ಸುಮಾರು 10-15 ದಿನಗಳಿಂದ ಸತತವಾಗಿ ತೀವ್ರ ತನಿಖೆಗೊಳಪಡಿಸಿದೆ. ಈಗ ಜನಾ ರೆಡ್ಡಿ ಬಂಧನದ ವೇಳೆ ಜಗನ್ ಬಗ್ಗೆ ಬಾಯಿಬಿಟ್ಟರೆ ಹಾಗೂ ದಾಳಿ ವೇಳೆ ದಾಖಲೆಗಳು ಸಿಕ್ಕರೆ ಜಗನ್ ಗೆ ಉರುಳಾಗಲಿದೆ.

ಅದಕ್ಕಿಂತ ಮುಖ್ಯವಾಗಿ ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮಗಳ ವಿರುದ್ಧ ತೆಲುಗುದೇಶಂ ನಾಯಕ ಚಂದ್ರಬಾಬು ನಾಯ್ಡು ದೊಡ್ಡ ಸಮರವನ್ನೇ ಸಾರಿದ್ದರು. ಇನ್ನು ಬ್ರಾಹ್ಮಣಿ ಸ್ಟೀಲ್ ಕಂಪನಿಯಲ್ಲೂ ಜಗನ್ ಪಾಲು ಇದೆ. ಈ ಹಿನ್ನೆಲೆಯಲ್ಲಿ ಜನಾ ರೆಡ್ಡಿ ಬಂಧನವು ಜಗನ್ ಪಾಲಿಗೆ ಮಗ್ಗುಲ ಮುಳ್ಳಾಗಲಿದೆ.

English summary
Janardhan Reddy is arrested by CBI under Section 120 and 120 B. As Jagan is a close associate of J. Reddy he is feeling the heat. The arrest of Gali Janardhan Reddy a big blow to YSR Congress president YS Jagan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X