ಹಾರುವ ಹಕ್ಕಿ ರೆಡ್ಡಿಯ ರೆಕ್ಕೆ ಮುರಿದ ಸಿಬಿಐ

CBI spoils Reddys plans
ಬಳ್ಳಾರಿ, ಸೆ. 5 : ಸಿಬಿಐ ಅಧಿಕಾರಿಗಳು ಸೆಪ್ಟೆಂಬರ್ 30ರೊಳಗೆ ತಮ್ಮನ್ನು ಬಂಧಿಸುತ್ತಾರೆ ಎನ್ನುವ ಖಚಿತವಾದ ಸುಳಿವು ಜಿ. ಜನಾರ್ದನ ರೆಡ್ಡಿ ಅವರಲ್ಲಿ ಇತ್ತು. ಈ ಕಾರಣಕ್ಕಾಗಿಯೇ ಭಾನುವಾರ ರಾತ್ರಿ ಅಥವಾ ಸೋಮವಾರ ರಾತ್ರಿ ವಿದೇಶಕ್ಕೆ ಹೋಗಲಿದ್ದರು ಎಂಬ ಖಚಿತ ವರ್ತಮಾನ ಬಂದಿದೆ. ಬಿ. ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಸಿ ಮಾಧ್ಯಮಗಳ ದಿಕ್ಕನ್ನು ತಪ್ಪಿಸಲು ಯತ್ನಿಸಲು ಕೂಡ ಯತ್ನಿಸಿದ್ದರು.

ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯದ ಕಾರಣ ತೀವ್ರ ಮುಜುಗರಕ್ಕೆ ಈಡಾಗಿದ್ದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. ಸಚಿವ ಸ್ಥಾನಕ್ಕಾಗಿ ಬಿಜೆಪಿ ವರಿಷ್ಠರ ಮೇಲೆ ಒತ್ತಡದ ತಂತ್ರವನ್ನು ರೆಡ್ಡಿ ಸಹೋದರರು ಅನುಸರಿಸತೊಡಗಿದ್ದರು.

ಮಾಧ್ಯಮಗಳನ್ನು ದಿಕ್ಕುತಪ್ಪಿಸುವ ವಿಚಾರದಲ್ಲಿ ಬಿ. ಶ್ರೀರಾಮುಲು ರಾಜೀನಾಮೆ ಪ್ರಕರಣಕ್ಕೆ ಆದ್ಯತೆ ನೀಡಿದ ರೆಡ್ಡಿ ಬೆಂಗಳೂರಿನಲ್ಲಿದ್ದ ಜಗನ್ಮೋಹನ ರೆಡ್ಡಿ ಅವರನ್ನು ಮನೆಯಲ್ಲಿ ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾನುವಾರ ರಾತ್ರಿಯೇ ಜನಾರ್ದನ ರೆಡ್ಡಿ ವಿದೇಶಕ್ಕೆ ಹೋಗಬೇಕಿತ್ತು. ಆದರೆ, ಬಿ. ಶ್ರೀರಾಮುಲು ಅವರು ಸಂಜೆಯವರೆಗೆ ರಾಜೀನಾಮೆ ಸಲ್ಲಿಸಲು ಆಗದ ಕಾರಣ ಸೋಮವಾರ ರಾತ್ರಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿದ್ದವು.

15 ದಿನಗಳ ಕಾಲ ವಿದೇಶ ಪ್ರವಾಸ ಮುಗಿಸಿ ಬಳ್ಳಾರಿಗೆ 2 ದಿನಗಳ ಹಿಂದೆ ಆಗಮಿಸಿದ್ದ ಜನಾರ್ದನ ರೆಡ್ಡಿ, ಯಾವುದೇ ಕಾರಣಕ್ಕೂ ಸಿಬಿಐ ಬಂಧನಕ್ಕೆ ಒಳಗಾಗಬಾರದು ಎನ್ನುವ ಉದ್ಧೇಶ ಹೊಂದಿದ್ದರು. ವೈ.ಎಸ್.ಆರ್. ಜಗನ್ಮೋಹನ ರೆಡ್ಡಿ ಅವರು ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್‌ನ ಕೆಲ ವರಿಷ್ಠರನ್ನು ಭೇಟಿ ಆದ ನಂತರ ದೆಹಲಿ ತಲುಪಿ ಅಲ್ಲಿಂದಲೇ ಇಂಡೋನೇಷ್ಯಾಕ್ಕೆ ತೆರಳುವ ಪ್ರವಾಸ ಸಿದ್ಧವಾಗಿತ್ತು ಎನ್ನಲಾಗಿದೆ.

ಜನಾರ್ದನ ರೆಡ್ಡಿ ಅವರು ಇಂಡೋನೇಷ್ಯಾದಲ್ಲಿ ಕಬ್ಬಿಣದ ಅದಿರು ಗಣಿಯನ್ನು, ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಂಡೋನೇಷ್ಯಾದಲ್ಲೇ ಉಳಿಯುವ ವಿಚಾರದಲ್ಲಿ ವಿದೇಶ ಪ್ರವಾಸಕ್ಕೆ ತೆರಳಲು ಯೋಜಿಸಿದ್ದರು ಎಂದು ಹೇಳಲಾಗಿದೆ. ಜನಾರ್ದನ ರೆಡ್ಡಿ ಅವರು ಸಿಬಿಐ ಬಂಧನದ ಯೋಜನೆಯನ್ನೇ ಬುಡಮೇಲು ಮಾಡಿರುವ ಅಧಿಕಾರಿಗಳು ನಿರೀಕ್ಷಿಸಿದ ಅವಧಿಗೆ ಮೊದಲೇ ಅವರನ್ನು ಬಳ್ಳಾರಿಯಲ್ಲಿ ಸೋಮವಾರ ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+