ಯಡಿಯೂರಪ್ಪ ತಲೆ ಬೋಳಿಸಿಕೊಂಡು ಮನೆಗೆ ಹೋಗಲಿ

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಯಾರಬ್ ನಗರದಲ್ಲಿ ಕೆಪಿಸಿಸಿ ಸದಸ್ಯ ಬಿ. ಗುರಪ್ಪ ನಾಯ್ಡು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರಿಗೆ 2000 ಆಹಾರ ಧಾನ್ಯಗಳ ಬ್ಯಾಗ್‌ನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯವನ್ನು ಲೂಟಿ ಮಾಡಿದ ಯಡಿಯೂರಪ್ಪ ನ್ಯಾಯಾಲಯದ ಕಟಕಟೆ ಏರಿದ್ದು, ಜನರಿಂದಲೂ ಥೂ...ಛೀ ಎನಿಸಿಕೊಂಡಿದ್ದಾರೆ. ಅವರು ತಮ್ಮ ತಲೆ ಬೋಳಿಸಿ ಮನೆಗೆ ಹೋಗುವುದು ಸೂಕ್ತ ಎಂದ ಸಿದ್ದರಾಮಯ್ಯ, ಇಂಥವರಿಗೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಲೋಕಾಯುಕ್ತರ ಗಣಿ ವರದಿಯ ಶಿಫಾರಸನ್ನು ಜಾರಿಗೊಳಿಸುವವರೆಗೂ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದ ಅವರು, ಯಡಿಯೂರಪ್ಪರ ಕೈಗೊಂಬೆಯಾಗಿರುವ ಸಿಎಂ ಸದಾನಂದ ಗೌಡರಿಗೆ ಕೇವಲ ಹಲ್ಲು ಬಿಟ್ಟು ನಗುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.











Click it and Unblock the Notifications