ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟಿಗೆ ಗಾಲಿಕುರ್ಚಿ ಮೂಲಕ ಕೃಷ್ಣ ಭಟ್ ಹಾಜರು

By Mahesh
|
Google Oneindia Kannada News

B Krishna Bhat in high court
ಬೆಂಗಳೂರು, ಆ.29: ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರೆಂಟ್ ಪಡೆದು ನಾಪತ್ತೆಯಾಗಿದ್ದ ಬಿ ಕೃಷ್ಣಭಟ್ ಇಂದು ಗಾಲಿ ಕುರ್ಚಿ ಮೇಲೆ ಕೂತು ಹೈಕೋರ್ಟ್ ಪ್ರವೇಶಿಸಿದರು.

ಕೃಷ್ಣಭಟ್ ಎಲ್ಲಿದ್ದರೂ ಹುಡುಕಿ ಕೋರ್ಟ್ ಗೆ ಕರೆತರುವಂತೆ ಡಿಸಿಪಿ ಸೋನಿಯಾ ನಾರಂಗ್ ಅವರಿಗೆ ಜಸ್ಟೀಸ್ ಖೇಹರ್ ಆದೇಶ ನೀಡಿದ್ದರು. ಅದರಂತೆ, ಇಂದು ಜಯನಗರ ಎಸಿಪಿ ಜಿ.ಬಿ. ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಬಿಗಿ ಬಂದೋಬಸ್ಟ್ ನಡುವೆ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಯಿತು.

ರೋಗಗ್ರಸ್ತ ಭಟ್ : ಕೃಷ್ಣಭಟ್ ಅವರನ್ನು ಅಂಬುಲೆನ್ಸ್ ಮೂಲಕ ಕೋರ್ಟ್ ಗೆ ಕರೆತಂದು, ಗಾಲಿ ಕುರ್ಚಿ ಮೇಲೆ ಕೂರಿಸಿಕೊಂಡು ನ್ಯಾಯಾಲಯದ ಆವರಣಕ್ಕೆ ಕರೆದೊಯ್ಯಲಾಯಿತು. ಆರೋಗ್ಯ ಸುಧಾರಣೆಗಾಗಿ 2 ವಾರ ಕಾಲಾವಧಿ ನೀಡುವಂತೆ ಭಟ್ ಪರ ವಕೀಲರು ಕೋರಿದರು. ಅದರೆ, ಜಸ್ಟೀಸ್ ಖೇಹರ್ ಒಂದು ವಾರ ಮಾತ್ರ ಕಾಲಾವಕಾಶ ನೀಡಿದರು.

ವಿಶ್ವಭಾರತಿ ಸಂಘದಲ್ಲಿ ಹಿರಿತನದ ಆಧಾರದ ಮೇಲೆ ಜೇಷ್ಠತಾ ಪಟ್ಟಿ ತಯಾರಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಉಲ್ಲಂಘಿಸಿದ್ದ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಕೃಷ್ಣಭಟ್ ಅವರ ಮೇಲೆ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು.

ನಿವೇಶನ ಹಂಚಿಕೆ ಅವ್ಯವಹಾರದ ಆರೋಪಿ ಕೃಷ್ಣಭಟ್ ಮೇಲೆ ಜಾಮೀನು ರಹಿತ ವಾರೆಂಟ್ ಕೂಡಾ ಜಾರಿ ಮಾಡಲಾಗಿತ್ತು. ಇದೇ ಸೊಸೈಟಿಯ ನಿವೇಶನದ ಲಾಭ ಪಡೆದಿರುವ ಎಚ್ಡಿಕೆ ದಂಪತಿಗಳ ಜಾಮೀನು ಅರ್ಜಿ ಕೂಡಾ ವಜಾಗೊಂಡಿದ್ದು, ವಿಚಾರಣೆ ನಡೆಯಬೇಕಿದೆ.

English summary
B Krishna Bhat has appeared in high court today(Aug.29). He is the main accused in Vishwabharati co operative society sites distribution irregularity case. Earlier court has given lookout notice on him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X